ಕಾಡಿನಂಚಿನಲ್ಲಿ ಬೀಡುಬಿಟ್ಟಿವೆ 21 ಹುಲಿಗಳು : ಅರಣ್ಯಾಧಿಕಾರಿ ಎಚ್ಚರಿಕೆ

ಹುಲಿ ಸೆರೆಹಿಡಿಯುವ ಕಾರ್ಯಾಚರಣೆ ಚುರುಕು

ಮೈಸೂರು: ಜಿಲ್ಲೆಯ ಕಾಡಂಚಿನ ಗ್ರಾಮಗಳಿಗೆ ಬರೋಬರಿ 21 ಹುಲಿಗಳು ಬಂದಿವೆ ಎಂದು ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಮೈಸೂರು ಜಿಲ್ಲೆಯ ಎಚ್‌.ಡಿ ಕೋಟೆ, ಸರಗೂರು ಭಾಗದಲ್ಲಿ ಹುಲಿ ಕಾಟ ಹೆಚ್ಚಾಗಿದೆ. ಮೂವರ ರೈತರು ಬಲಿಯಾದ ಘಟನೆ ನಡೆದಿತ್ತು. ಈ ಬೆನ್ನಲ್ಲೇ ಅರಣ್ಯ ಇಲಾಖೆ ಜನರನ್ನು ಕಾಡಿದ್ದ ಹುಲಿಯನ್ನು ಸೆರೆಹಿಡಿದಿತ್ತು. ಜೊತೆಗೆ ಕಾಡಂಚಿನ ರೈತರ ರಕ್ಷಣೆಗೆ ಹಲವು ಕ್ರಮಗಳನ್ನ ಕೈಗೊಳ್ಳಲು ಮುಂದಾಗಿತ್ತು. ಈ ನಡುವೆ ಒಂದಲ್ಲ ಎರಡಲ್ಲ ಬರೋಬ್ಬರಿ 21 ಹುಲಿಗಳು ಎಂಟ್ರಿ ಕೊಟ್ಟಿವೆ ಎಂದು ಮೈಸೂರು ಡಿಸಿಎಫ್ ಪರಮೇಶ್ ಅಧಿಕೃತ ಮಾಹಿತಿ ನೀಡಿದ್ದಾರೆ.

ಎಚ್.ಡಿ ಕೋಟೆ, ಸರಗೂರು ಹಾಗೂ ನಂಜನಗೂಡು ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಒಟ್ಟು 21 ಹುಲಿಗಳು ಬೀಡುಬಿಟ್ಟಿವೆ. ಒಟ್ಟು 26 ಹುಲಿಗಳು ಕಾಡಿನಿಂದ ನಾಡಿಗೆ ಬಂದಿದ್ದವು. ಅದರಲ್ಲಿ ಐದು ಹುಲಿ ಹಿಡಿಯಲಾಗಿದೆ. ಇನ್ನೂ 21 ಹುಲಿ ನಾಡಿನಲ್ಲೇ ಓಡಾಡುತ್ತಿವೆ. ಹೀಗಾಗಿ ಜನರು ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ ಎಂದು ಡಿಸಿಎಫ್ ಪರಮೇಶ್ ಹೇಳಿದ್ದಾರೆ.





















































 
 

ಇಂತಹ ಘಟನೆ ಇದೇ ಮೊದಲೇನಲ್ಲ 2014, 2018-19ರಲ್ಲೂ ಆಗಿದೆ, ನಾನು ಕಂಡಂತೆ ಇದು ಮೂರನೇ ಘಟನೆ. ಈಗ ಹೆಡಿಯಾಲ ಉಪವಿಭಾಗದಲ್ಲಿ ಮೂರು ಕಡೆ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿದೆ. ಮಾನವ ಜೀವ ಅತ್ಯಮೂಲ್ಯ ಆಗಿರುವುದರಿಂದ ಸ್ಥಳೀಯರೊಟ್ಟಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

error: Content is protected !!
Scroll to Top