ಬುಡೋಜರ್ ನುಗ್ಗಿಸಿ ಮನೆಯನ್ನು ಕೆಡವಿ ಹಾಕಿದ ಭದ್ರತಾ ಪಡೆಗಳು
ಶ್ರೀನಗರ : ದೆಹಲಿಯ ಕೆಂಪುಕೋಟೆಯ ಬಳಿ ಕಳೆದ ಸೋಮವಾರ ಸಂಭವಿಸಿದ್ದ ಕಾರು ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಡಾ.ಉಮರ್ ನಬಿ ಅಲಿಯಾಸ್ ಡಾ. ಮೊಹಮ್ಮದ್ ಉಮರ್‌ನ ಮನೆಯನ್ನು ಭದ್ರತಾ ಪಡೆ ಧ್ವಂಸಗೊಳಿಸಿದೆ. ಈ ಸ್ಫೋಟದಲ್ಲಿ ಅತ್ಮಾಹುತಿ ಬಾಂಬರ್ ಆಗಿದ್ದ ಡಾ. ಉಮರ್ ಸತ್ತಿರುವುದು ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ದೆಹಲಿ ಸ್ಫೋಟದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಉಗ್ರರ ಹಿಂದಿನ ರಹಸ್ಯ ಒಂದೊಂದಾಗಿಯೇ ಹೊರಬರುತ್ತಿದೆ. ಡಾ.ಉಮರ್ ನಬಿ ತಾಯಿಯ ಡಿಎನ್‌ಎ ಪರೀಕ್ಷೆ ಮಾಡಿದಾಗ ಸ್ಫೋಟದ ವೇಳೆ ಕಾರಿನಲ್ಲಿ ಸಿಕ್ಕಿದ್ದ ಶವದ ಡಿಎನ್‌ಎಗೆ ಹೊಂದಾಣಿಕೆಯಾಗಿದೆ. ಇದರಿಂದ ಸ್ಫೋಟದ ಪ್ರಮುಖ ರೂವಾರಿ ಡಾ.ಉಮರ್ ನಬಿ ಎಂಬುದು ಸಾಬೀತಾಗಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿದ್ದ ಉಗ್ರ ಉಮರ್‌ನ ಮನೆಯನ್ನು ಶುಕ್ರವಾರ ಭದ್ರತಾ ಪಡೆಗಳು ನೆಲಸಮಗೊಳಿಸಿವೆ. ಈ ಹಿಂದೆ ಪಹಲ್ಗಾಮ್ ದಾಳಿಯ ಸಂದರ್ಭದಲ್ಲಿಯೂ ಕೃತ್ಯದಲ್ಲಿ ಭಾಗಿಯಾದವರ ಮನೆಯನ್ನು ಭದ್ರತಾ ಪಡೆಗಳು ಧ್ವಂಸಗೊಳಿಸಿದ್ದವು.
























