ಪುತ್ತೂರು: ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯ ಸಂಸ್ಥೆಯ ಸಂಸ್ಥಾಪಕ ಜಿ. ಎಲ್. ಆಚಾರ್ಯ ಅವರ 101 ನೇ ಜನ್ಮ ದಿನವನ್ನು ನ. 13 ರಂದು ಸಂಸ್ಥೆಯಲ್ಲಿ ಆಚರಣೆ ಮಾಡಲಾಯಿತು.
ಈ ಹಿನ್ನೆಲೆ 10 ಡಬ್ಬಲ್ ಡೆಕ್ಕರ್ ಕಾಟ್ಗಳನ್ನು ಪುತ್ತೂರಿನ ರಾಮಕೃಷ್ಣ ಆಶ್ರಮಕ್ಕೆ ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಜ್ಯುವೆಲ್ಲರ್ಸ್ನ ಆಡಳಿತ ನಿರ್ದೇಶಕ ಜಿ.ಎಲ್. ಬಲರಾಮ ಆಚಾರ್ಯ, ಆಶ್ರಮದ ಕಾರ್ಯದರ್ಶಿ ಗುಣಪಾಲ್ ಜೈನ್, ಸದಸ್ಯ ಹರೇಕೃಷ್ಣ ಕಡಂಬಳಿತ್ತಾಯ ಮತ್ತು ಜಂಟಿ ಕಾರ್ಯದರ್ಶಿ ವತ್ಸಲ ರಾಜಿ ಉಪಸ್ಥಿತರಿದ್ದರು.
























