ಮಕ್ಕಳು ನಮ್ಮ ಪಾಲಕರು – ರೊ. ಚಂದ್ರಹಾಸ ರೈ

ಪುತ್ತೂರು: ಇಲ್ಲಿನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಅರ್ಥಪೂರ್ಣವಾಗಿ ಜರುಗಿತು. ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ 136ನೇ ಜನ್ಮದಿನದ ಅಂಗವಾಗಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಮುಖ್ಯ ಅತಿಥಿಯವರಾಗಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಉಪನ್ಯಾಸಕ, ಜೇಸೀ ತರಬೇತುದಾರ Rtn. ಚಂದ್ರಹಾಸ ರೈ ಮಾತನಾಡಿ ಸುಸಂಸ್ಕೃತ ಶಿಕ್ಷಣ ಸಂಸ್ಥೆಯಾಗಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಒಂದು ಸುಯೋಗ ಎಂದರು. ಹಿರಿಯರಾದ ನಾವು ಮಕ್ಕಳಿಂದ ಕಲಿಯಬೇಕಾದ್ದು ಸಾಕಷ್ಟಿದೆ ಎಂದು ಹೇಳಿ ಇಂದಿನ ಕಾರ್ಯಕ್ರಮದ ಉದ್ಘಾಟಕಿಯಾದ ಬಾಲಪ್ರತಿಬೆ ಸೋನಿಕಾ ಅವರ ಸಾಧನೆ ಮಾದರಿಯಾದುದು ಎಂದರು. ಪೋಷಕರ ಜವಾಬ್ದಾರಿಯನ್ನು ಅವರು ಒತ್ತಿ ಹೇಳಿ ಪೋಷಕರಿಗೆ ಸಂದೇಶ ನೀಡಿದರು.

ಅರ್ಥಪೂರ್ಣ ಉದ್ಘಾಟಕಿ – ಉದ್ಘಾಟನೆ
ಮೈಸೂರಿನ ಐಡಿಯಲ್ ಜಾವಾ ರೋಟರಿ ಸ್ಕೂಲ್’ನಲ್ಲಿ 1ನೇ ತರಗತಿಯ ವಿದ್ಯಾರ್ಥಿನೀಯಾಗಿರುವ ಸೋನಿಕಾ ಜನಾರ್ದನ್ ಅವರಿಂದ ಉದ್ಘಾಟನೆಗೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮ ಸುಂದರ ಅರ್ಥ ಪಡೆಯಿತು.

ಖ್ಯಾತ ಜಾನಪದ ಗಾಯಕ ಚೋಮ ಬೆಟ್ಟಂಪಾಡಿ ಅವರ ಮೊಮ್ಮಗಳು ಮತ್ತು ಮೈಸೂರಿನಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿರುವ ಜನಾರ್ದನ್ – ಪ್ರಮೀಳಾ ದಂಪತಿಗಳ ಪುತ್ರಿಯಾಗಿರುವ ಸೋನಿಕಾ ಅವರು ಉತ್ತಮ ಗಾಯಕಿ. ಖ್ಯಾತ ಸಾಹಿತಿ, ರಾಗ ಸಂಯೋಜಕ, ಸಂಗೀತಜ್ಞ ಆಗಿರುವ ಹಂಸಲೇಖಾ ಅವರು ರಾಗ ಸಂಯೋಜಿಸಿದ ಭಾರತೀಯ ಸಂವಿಧಾನದ ಪೂರ್ವ ಪೀಠಿಕೆಯನ್ನು ಸೋನಿಕಾ ಅವರು ಸಂಗೀತ ಸಹಿತವಾಗಿ ಉಲ್ಲಾಸಭಾರಿತವಾಗಿ ಹಾಡಿದ್ದು ವಿಶೇಷವಾಗಿತ್ತು.





















































 
 

ಮಕ್ಕಳ ದಿನಾಚರಣೆಯ ಬಾಬ್ತು ಎವಿಜಿ ಸನ್ಮಾನ
ಗಾಯನ ಪ್ರತಿಭೆ ಸೋನಿಕಾ ಜನಾರ್ದನ್ ಅವರಿಗೆ ಶಾಲೆಯ ವತಿಯಿಂದ ಮಕ್ಕಳ ದಿನಾಚರಣೆಯ ಬಾಬ್ತು ಎವಿಜಿ ಸನ್ಮಾನ ನೀಡಲಾಯಿತು. ಈ ಸಂದರ್ಭದಲ್ಲಿ ಆಕೆಯ ತಂದೆ ಜನಾರ್ದನ್, ತಾಯಿ ಪ್ರಮೀಳಾ, ಸಹೋದರಿ ಅನಿಕಾ ಮತ್ತು ಖುಷಿತಾ ಉಪಸ್ಥಿತರಿದ್ದರು.

ಸಭಾಧ್ಯಕ್ಷತೆ ವಹಿಸಿದ್ದ ಶಾಲಾಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರು ಮಾತನಾಡಿ ಭವಿಷ್ಯದ ಪ್ರಜೆಗಳಾದ ಇಂದಿನ ಮಕ್ಕಳನ್ನು ರಾಷ್ಟ್ರಪ್ರೇಮಸಹಿತವಾಗಿ ಬೆಳೆಸುವ ಜವಾಬ್ದಾರಿ ಹಿರಿಯರದ್ದಾಗಿದ್ದು ಅದಕ್ಕೆ ಪೂರಕವಾಗಿ ನಮ್ಮ ಶಾಲೆ ಕಾರ್ಯಾಚರಿಸುತ್ತಿದೆ ಎಂದರು.

ಗಾಯನ ಗೋಷ್ಠಿ
ಸೋನಿಕಾ, ಜನಾರ್ದನ್ ಮತ್ತು ಖುಷಿತಾ ಅವರಿಂದ ಸುಶ್ರಾವ್ಯ ಹಾಡುಗಳ ಗೋಷ್ಠಿ ನಡೆದು ಎಲ್ಲರೂ ಅದನ್ನು ಆಸ್ವಾದಿಸಿದರು.

ಗೌರವ ಉಪಸ್ಥಿತಿಯಲ್ಲಿದ್ದ ಶಾಲಾ ಸಂಚಾಲಕ ಎ.ವಿ. ನಾರಾಯಣ ಮತ್ತು ಶಾಲಾ ನಿರ್ದೇಶಕ ಸೀತಾರಾಮ ಪೂಜಾರಿ ಮೇಲ್ಮಜಲು ಶುಭ ಹಾರೈಸಿದರು.

ಉಪಾಧ್ಯಕ್ಷ ಉಮೇಶ್ ಮಳುವೇಲು, ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗ್ಡೆ, ಪ್ರಾಂಶುಪಾಲ ಅಮರನಾಥ್ ಪಟ್ಟೆ ಮತ್ತು ವಿಧ್ಯಾರ್ಥಿ ನಾಯಕ ಕವನ್ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗನ್ವಿತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಯುಕೆಜಿಯ ಚಾರ್ವಿ, ವಿಭಾ ಮತ್ತು ಆರುಷಿ ಪ್ರಾರ್ಥನೆ, 6ನೇ ತರಗತಿಯ ಅಡ್ವಿಕ್ ಬಂಜನ್ ಸ್ವಾಗತ ನುಡಿ ಮತ್ತು ಜೋಸ್ತ್ನಾ ಎ.ಎನ್. ಧನ್ಯವಾದ ಸಮರ್ಪಣೆ ಮಾಡಿದರು. ವಿಖ್ಯಾತ್ ಸಂವಿಧಾನ ಪೀಠಿಕೆಯ ವಾಚನ, ಶಿಕ್ಷಕಿಯರಾದ ಹಿತಶ್ರೀ ಮತ್ತು ಸುಚಿತ್ರಾ ಅತಿಥಿಯವರ ಪರಿಚಯ ನೆರವೇರಿಸಿದರು. ಶಿಕ್ಷಕಿ ಸವಿತಾ ಕುಮಾರಿ ಬಹುಮಾನ ವಿತರಣೆ ಕಾರ್ಯವನ್ನು ನಿರ್ವಹಿಸಿದರು.

error: Content is protected !!
Scroll to Top