ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರಿಗೆ ಮೊಬೈಲ್, ರಾಜಾತಿಥ್ಯ: ತನಿಖೆಗೆ NIA ಎಂಟ್ರಿ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನೊಳಗೆ ಉಗ್ರರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ, ಜೈಲಿನಲ್ಲಿರುವ ಶಂಕಿತ ಉಗ್ರನ ಕೈಯೊಳಗೆ ಮೊಬೈಲ್ ಇರುವ ಚಿತ್ರವೊಂದು ವೈರಲ್ ಆಗಿದೆ. ಈ ಬಗ್ಗೆ ತನಿಖೆ ನಡೆಸಲು NIA ಮುಂದಾಗಿದೆ.

ಶಂಕಿತ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಮೊಬೈಲ್ ಬಳಸುತ್ತಿರುವ ವಿಡಿಯೋ ಸಿಕ್ಕ ಬಳಿಕ ಎನ್‌ಐಎ ಅಧಿಕಾರಿಗಳು ತಕ್ಷಣ ಜೈಲಿಗೆ ಭೇಟಿ ನೀಡಿ ವಿಚಾರಣೆ ಆರಂಭಿಸಿದ್ದಾರೆ. ಮೊಬೈಲ್ ಉಗ್ರನ ಕೈಗೆ ಹೇಗೆ ತಲುಪಿತು ಎಂಬುದರ ಕುರಿತು ಅಧಿಕಾರಿಗಳು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಉಗ್ರನಿಗೆ ಮೊಬೈಲ್ ನೀಡಲು ಜೈಲಿನೊಳಗಿಂದ ಯಾರಾದರೂ ಸಹಕರಿಸಿದರೆ, ಅವರ ಮೇಲೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ತನಿಖಾ ಅಧಿಕಾರಿಗಳು ಜೈಲಿನ ಅಧಿಕಾರಿಗಳಿಂದ ಉಗ್ರನ ಚಟುವಟಿಕೆಗಳ ವಿವರಗಳನ್ನು ಕಲೆಹಾಕುತ್ತಿದ್ದಾರೆ. ವಿಡಿಯೋ ಯಾವಾಗ ಚಿತ್ರೀಕರಿಸಲಾಯಿತು, ಎಷ್ಟು ದಿನಗಳಿಂದ ಮೊಬೈಲ್ ಉಗ್ರನ ಬಳಿಯಿತ್ತು ಹಾಗೂ ಮೊಬೈಲ್ ಈಗ ಎಲ್ಲಿದೆ ಎಂಬುದರ ಬಗ್ಗೆ ವಿಚಾರಣೆ ನಡೆಯುತ್ತಿದೆ.





















































 
 

ಇದೇ ವೇಳೆ, ಉಗ್ರನು ಜೈಲಿನೊಳಗೇ ಕುಳಿತು ದೇಶ ವಿರೋಧಿ ಚಟುವಟಿಕೆಗಳ ಪ್ಲಾನ್ ಮಾಡುತ್ತಿದ್ದಾನೆಯೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಈ ಹಿನ್ನೆಲೆ ಎನ್‌ಐಎ ತಂಡ ತನಿಖೆ ನಡೆಸುತ್ತಿದೆ.

error: Content is protected !!
Scroll to Top