ನವದೆಹಲಿ ಬ್ಲಾಸ್ಟ್: ಉಗ್ರರ ಡೈರಿ ಪತ್ತೆ ಹಚ್ಚಿದ NIA ಅಧಿಕಾರಿಗಳು

ನವದೆಹಲಿ: ಕೆಂಪು ಕೋಟೆಯ ಸಮೀಪ ಸ್ಪೋಟ ನಡೆಸಿದ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ NIA ಅಧಿಕಾರಿಗಳು ಉಗ್ರರ ಡೈರಿಯನ್ನು ಪತ್ತೆ ಮಾಡಿದ್ದು, ಇದರಲ್ಲಿ ಮಹತ್ವದ ಹಲವಾರು ಅಂಶಗಳು, ಸ್ಪೋಟಕ ಮಾಹಿತಿಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಈ ಡೈರಿ ಉಗ್ರರಾದ ‌ಮುಜಾಮಿಲ್ ಮತ್ತು ಉಮರ್‌ಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಹಲವಾರು ಕೋಡ್‌ವರ್ಡ್‌ಗಳು, ಷಡ್ಯಂತ್ರಗಳು ಹೊರಬಿದ್ದಿವೆ ಎಂದು ಮಾಹಿತಿ ಇದೆ. ಡೈರಿಯಲ್ಲಿ ಹಲವು ಬಾರಿ ಆಪರೇಷನ್ ಪದವನ್ನು ಉಗ್ರರು ಬಳಕೆ ಮಾಡಿದ್ದು, ಉಕಾಸ (ಜೇಡ) ಎಂಬ ಹ್ಯಾಂಡ್ಲರ್ ಹೆಸರು ಕೂಡ ಡೈರಿಯಲ್ಲಿ ಪತ್ತೆಯಾಗಿದೆ. ಇದಲ್ಲದೆ, 25 ವ್ಯಕ್ತಿಗಳು ಹೆಸರಿದ್ದು, ಇವರಲ್ಲಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರ ಹಾಗೂ ಫರೀದಾಬಾದ್ ಮೂಲದವರಾಗಿದ್ದಾರೆ ಎಂಬ ಮಾಹಿತಿಯೂ ಇದೆ.

ಈ ಡೈರಿಗಳನ್ನು ಮಂಗಳವಾರ ಮತ್ತು ಬುಧವಾರ ಉಗ್ರ ಉಮರ್‌ನ ಕೊಠಡಿ ಸಂಖ್ಯೆ ನಾಲ್ಕು ಮತ್ತು ಉಗ್ರ ಮುಜಮ್ಮಿಲ್ ಕೊಠಡಿ ಸಂಖ್ಯೆ 13 ರಿಂದ ವಶಪಡಿಸಿಕೊಳ್ಳಲಾಗಿದೆ. 8 ಮಂದಿ ಉಗ್ರರು ನಾಲ್ಕು ಸ್ಥಳಗಳಲ್ಲಿ ಸರಣಿ ದಾಳಿ ನಡೆಸಲು ಯೋಜನೆ ರೂಪಿಸಿದ್ದು, ಪ್ರತೀ ಸ್ಥಳಕ್ಕೆ ತಲಾ ಇಬ್ಬರು ಉಗ್ರರನ್ನು ರವಾನಿಸಲು ಸಂಚು ರೂಪಿಸಿದ್ದ ಮಾಹಿತಿ ಬಹಿರಂಗವಾಗಿದೆ.





















































 
 
error: Content is protected !!
Scroll to Top