ಕೆಂಪುಕೋಟೆ ಸ್ಫೋಟಕ್ಕೆ ಟರ್ಕಿ ಲಿಂಕ್‌

ಟರ್ಕಿಯ ವ್ಯಕ್ತಿ ಉಗ್ರರ ಹ್ಯಾಂಡ್ಲರ್‌

ನವದೆಹಲಿ: ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಬಾಂಬ್‌ ಸ್ಫೋಟಕ್ಕೆ ಟರ್ಕಿ ಜತೆ ಲಿಂಕ್‌ ಇರುವುದು ತನಿಖೆ ವೇಳೆ ಯಿಳಿದುಬಂದಿದೆ. ಬಂಧಿತ ಶಂಕಿತರು ಟರ್ಕಿಯ ರಾಜಧಾನಿ ಅಂಕಾರಾದಿಂದ ಕಾರ್ಯನಿರ್ವಹಿಸುತ್ತಿದ್ದ ಓರ್ವ ಹ್ಯಾಂಡ್ಲರ್‌ ಜೊತೆ ಸಂಪರ್ಕದಲ್ಲಿದ್ದರು ಎನ್ನುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.

Ukasa ಎಂಬ ಕೋಡ್‌ವರ್ಡ್‌ನಿಂದ ಗುರುತಿಸಲ್ಪಟ್ಟ ಹ್ಯಾಂಡ್ಲರ್ ಜೊತೆ ಎನ್‌ಕ್ರಿಪ್ಟ್ ಮಾಡಿದ ಸಂದೇಶ ವೇದಿಕೆಯಾದ Session ಅಪ್ಲಿಕೇಶನ್ ಬಳಸಿ ಉಗ್ರರು ಸಂಪರ್ಕ ನಡೆಸುತ್ತಿದ್ದರು. Ukasa ಎಂದರೆ ಅರೇಬಿಕ್ ಭಾಷೆಯಲ್ಲಿ ʼಜೇಡʼ ಎಂದು ಅರ್ಥ. ವ್ಯಕ್ತಿಯ ಹೆಸರನ್ನು ಮರೆಮಾಚಲು ಅವರು Ukasa ಹೆಸರನ್ನು ಬಳಸಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಗುಂಪಿನ ಚಲನವಲನಗಳು ಮತ್ತು ಹಣಕಾಸು ಸಹಾಯ ಎಲ್ಲವೂ ಹ್ಯಾಂಡ್ಲರ್‌ನಿಂದಲೇ ನಡೆದಿದೆ ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.





















































 
 

ಫರಿದಾಬಾದ್ ಭಯೋತ್ಪಾದಕ ಮಾಡ್ಯೂಲ್‌ಗೆ ಸಂಬಂಧಿಸಿದ ಹಲವಾರು ವ್ಯಕ್ತಿಗಳು ಮಾರ್ಚ್ 2022ರಲ್ಲಿ ಭಾರತದಿಂದ ಟರ್ಕಿಗೆ ಪ್ರಯಾಣಿಸಿದ್ದರು. ಈ ಭೇಟಿಯ ಸಮಯದಲ್ಲಿ ಅವರು ತಮ್ಮ ಹ್ಯಾಂಡ್ಲರ್‌ನೊಂದಿಗೆ ಸಂಪರ್ಕಕ್ಕೆ ಬಂದು ಕೃತ್ಯಕ್ಕೆ ಸಂಚು ರೂಪಿಸಿರುವ ಸಾಧ್ಯತೆಯಿದೆ. ಆರೋಪಿಗಳು ಮತ್ತು ಅವರ ನಿರ್ವಾಹಕರ ನಡುವಿನ ಎಲ್ಲ ಸಂವಹನಗಳು ಸೆಶನ್‌ ಅಪ್ಲಿಕೇಶನ್‌ನಲ್ಲೇ ನಡೆಯುತ್ತಿತ್ತು. ಈ ಗುಂಪು ವಿದೇಶಿ ವ್ಯಕ್ತಿಗಳು ಹೇಳಿದಂತೆ ಕೆಲಸ ಮಾಡುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿಯ ಕೆಂಪುಕೋಟೆ, ಇಂಡಿಯಾ ಗೇಟ್‌, ಸೇನಾ ಭವನ, ಮಾಲ್‌ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕೃತ್ಯ ನಡೆಸಲು ಈ ಗುಂಪು ಪ್ಲ್ಯಾನ್‌ ಮಾಡಿದ ವಿಚಾರ ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

error: Content is protected !!
Scroll to Top