ಟೆರರ್‌ ಡಾಕ್ಟರ್‌ ಡಾ.ಶಾಹೀನ್‌ ಕೃತ್ಯದಿಂದ ತಂದೆಗೆ ಆಘಾತ

2900 ಕೆಜಿ ಸ್ಫೋಟಕ ಪ್ರಕರಣದಲ್ಲಿ ಸೆರೆಯಾಗಿರುವ ಡಾ.ಶಾಹೀನ್‌

ನವದೆಹಲಿ: ಸ್ಫೋಟಕ ಸಾಗಣೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ಲಖನೌ ಮೂಲದ ವೈದ್ಯೆ ಡಾ. ಶಾಹೀನ್‌ಳ ಕೃತ್ಯ ತಂದೆ ಸೈಯದ್‌ ಅಹ್ಮದ್‌ ಅನ್ಸಾರಿಗೆ ಆಘಾತವುಂಟುಮಾಡಿದೆ.

ಸೈಯದ್‌ ಅಹ್ಮದ್‌ ಅನ್ಸಾರಿಗೆ 3 ಮಕ್ಕಳು. ಶೊಯೇಬ್, ಶಾಹೀನ್ ಮತ್ತು ಪರ್ವೇಜ್. ಹಿರಿಯ ಪುತ್ರ ಶೊಯೇಬ್ ಜೊತೆ ಈಗ ವಾಸವಾಗಿದ್ದಾರೆ. ಎರಡನೆಯವಳು ಶಾಹೀನ್. ಮೂರನೇಯವನು ಪರ್ವೇಜ್ ಅನ್ಸಾರಿ. ಶಾಹೀನ್‌ಗೆ ಮಹಾರಾಷ್ಟ್ರದ ವ್ಯಕ್ತಿಯ ಜೊತೆ ಮದುವೆಯಾಗಿತ್ತು. ಆಕೆ ಫರೀದಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಳು. ನನ್ನ ಮಗಳು ಇಂತಹ ಕೃತ್ಯದಲ್ಲಿ ತೊಡಗಿದ್ದಾಳೆ ಅಂತ ನಂಬೋಕಾಗ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.





















































 
 

ಒಂದು ತಿಂಗಳಿನಿಂದ ಶಾಹೀನ್ ಜೊತೆ ನಾನು ಮಾತನಾಡಿಲ್ಲ. ಪರ್ವೇಜ್ ಜೊತೆ ವಾರಕ್ಕೊಮ್ಮೆ ಮಾತಾಡ್ತೀನಿ. ನಾನು ಕೊನೆಯ ಬಾರಿಗೆ ಶಾಹೀನ್ ಜೊತೆ ಮಾತನಾಡಿದ್ದು ಸುಮಾರು ಒಂದು ತಿಂಗಳ ಹಿಂದೆ. ಶಾಹೀನ್ ಬಂಧನದ ಬಗ್ಗೆ ನನಗೆ ತಿಳಿದಿರಲಿಲ್ಲ. ‌ಇಂದು ಬೆಳಗ್ಗೆ ಪೊಲೀಸರು ಪರ್ವೇಜ್ ಮನೆ ಮೇಲೆ‌ ದಾಳಿ ಮಾಡಿದ್ದು ಗೊತ್ತಿದೆ ಎಂದು ಸೈಯದ್ ಅಹ್ಮದ್ ಅನ್ಸಾರಿ ತಿಳಿಸಿದ್ದಾರೆ. ಶಾಹೀನ್ ತನಿಖೆ ಬಳಿಕ ಪರ್ವೇಜ್ ಮನೆಗೆ ತನಿಖಾ ತಂಡ ದಾಳಿ ಮಾಡಿತ್ತು.

ಶಾಹೀನ್ ಹರಿಯಾಣದ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಹೊಂದಿದ್ದಾಳೆ. ಫರಿದಾಬಾದ್‌ನಲ್ಲಿ ಬಾಡಿಗೆಗೆ ಪಡೆದಿದ್ದ ಎರಡು ಕೊಠಡಿಗಳಿಂದ 2,900 ಕೆಜಿ ಸ್ಫೋಟಕಗಳು ಮತ್ತು ದಹನಕಾರಿ ವಸ್ತುಗಳನ್ನು ವಶಪಡಿಸಿಕೊಂಡ ನಂತರ ಬಂಧಿಸಲ್ಪಟ್ಟ ಕಾಶ್ಮೀರಿ ವೈದ್ಯ ಡಾ.ಮುಜಮ್ಮಿಲ್ ಜೊತೆ ಕೂಡ ನಿಕಟ ಸಂಪರ್ಕ ಹೊಂದಿದ್ದಾಳೆಂದು ವರದಿಯಾಗಿದೆ.

ಮುಜಮ್ಮಿಲ್ ಮಾಹಿತಿಯ ಆಧಾರದ ಮೇಲೆ ಫರಿದಾಬಾದ್ ಪೊಲೀಸರು ಅಲ್-ಫಲಾಹ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಶಾಹೀನ್‌ಗೆ ಸೇರಿದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನದಿಂದ ಕಲಾಶ್ನಿಕೋವ್ ಅಸಾಲ್ಟ್ ರೈಫಲ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಕೆಯನ್ನು ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಭಾರತದ ಮಹಿಳಾ ಪಡೆಯ ಮುಖ್ಯಸ್ಥಳಾಗಿ ನೇಮಿಸಲಾಗಿತ್ತು. ಭಾರತದಲ್ಲಿ ಉಗ್ರರ ಮಹಿಳಾ ಪಡೆಗೆ ನೇಮಕಾತಿಗಳನ್ನು ಮಾಡುವ ಹೊಣೆಯನ್ನು ಈ ಲೇಡಿ ಡಾಕ್ಟರ್‌ ವಹಿಸಿಕೊಂಡಿದ್ದಳು ಎನ್ನಲಾಗಿದೆ. ಆಪರೇಷನ್‌ ಸಿಂದೂರ ಕಾರ್ಯಾಚರಣೆಯಲ್ಲಿ ಸಾಕಷ್ಟು ಹೊಡೆತ ತಿಂದಿರುವ ಜೈಶ್‌ ಉಗ್ರ ಸಂಘಟನೆ ಸೇಡು ತೀರಿಸುವ ಸಲುವಾಗಿ ಹೊಸದಾಗಿ ಮಹಿಳಾ ವಿಭಾಗವನ್ನು ಪ್ರಾರಂಭಿಸಿದೆ. ಇದಕ್ಕೆ ಜೈಶ್‌ ಮುಖಂಡ ಜಾಗತಿಕ ಉಗ್ರ ಅಜರ್‌ ಮಸೂದ್‌ನ ಸಹೋದರಿ ನಾದಿಯಾ ಅಜರ್‌ ಮುಖ್ಯಸ್ಥಳಾಗಿದ್ದಾಳೆ. ಈಕೆಯ ಗಂಡ ಆಪರೇಷನ್‌ ಸಿಂದೂರ ಕಾರ್ಯಾಚರಣೆಗೆ ಬಲಿಯಾಗಿದ್ದ.

error: Content is protected !!
Scroll to Top