ತಿರುಪತಿ ಬೆಟ್ಟದಲ್ಲಿ ಮಾಂಸಾಹಾರ ಸೇವನೆ: ಇಬ್ಬರು ಸಿಬ್ಬಂದಿ ವಜಾ

ತಿರುಪತಿ: ತಿರುಮಲ ದೇಗುಲದ ಸಿಬ್ಬಂದಿ ಪವಿತ್ರ ಬೆಟ್ಟಗಳಲ್ಲಿ ಮಾಂಸಾಹಾರ ಸೇವನೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಹಿಂದೂಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಅಲಿಪಿರಿ ‌ಕಾಲುದಾರಿಯ ಸಮೀಪ ಮಾಂಸಾಹಾರ ಸೇವನೆ ಮಾಡಿರುವ ಆಪಾದನೆ ಮೇಲೆ ಇಬ್ಬರು ಹೊರಗುತ್ತಿಗೆ ಸಿಬ್ಬಂದಿಯನ್ನು ದೇವಾಲಯದ ಆಡಳಿತ ಮಂಡಳಿ ವಜಾ ಮಾಡಿದೆ. ಈ ಬಗ್ಗೆ ತಿರುಮಲದ ಎರಡು ಟೌನ್ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಮಾಂಸಾಹಾರ ಸೇವನೆ ಮಾಡಿದವರನ್ನು ರಾಮಸ್ವಾಮಿ, ಸರಸಮ್ಮ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ.





















































 
 
error: Content is protected !!
Scroll to Top