ಡಿಕೆಶಿಗಿಲ್ಲ ಕುರ್ಚಿ : ಬಿಜೆಪಿಯ ಎಐ ವಿಡಿಯೋ ವೈರಲ್‌

ಕಾಂಗ್ರೆಸ್‌ಗೆ ಮುಜುಗರ ತಂದ ವಿಡಿಯೋ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ನಡೆಯುತ್ತಿರುವ ಕುರ್ಚಿ ಕಿತ್ತಾಟದ ಹಿನ್ನೆಲೆಯಲ್ಲಿ ಬಿಜೆಪಿ ಭಾನುವಾರ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ಎಕ್ಸ್‌ನಲ್ಲಿ ಬಿಡುಗಡೆಗೊಳಿಸಿದ ಕೃತಕ ಬುದ್ಧಿಮತ್ತೆ (ಎಐ) ಬಳಸಿ ತಯಾರಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿ ಕಾಂಗ್ರೆಸ್ಸನ್ನು ಮುಜುಗರಕ್ಕೀಡುಮಾಡಿದೆ.

ಡಿ.ಕೆ ಶಿವಕುಮಾರ್ ಅವರಿಗೆ ‘ನೋ ಚೇರ್ ನವೆಂಬರ್’ ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ ಕರ್ನಾಟಕ ಎಐ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಮೊಬೈಲ್‌ನಿಂದ ಡಿ.ಕೆ ಶಿವಕುಮಾರ್ ಅವರಿಗೆ ವಾಟ್ಸಾಪ್‌ನಲ್ಲಿ ಹಾಯ್ ಮೆಸೇಜ್‌ ಕಳುಹಿಸುತ್ತಿರುವುದನ್ನು ತೋರಿಸಲಾಗಿದೆ. ಇದರ ನಂತರ ಸ್ಕ್ರ್ಯಾಚ್ಕಾರ್ಡ್ ಬರುತ್ತದೆ. ಡಿ.ಕೆ ಶಿವಕುಮಾರ್ ಅವರು ಆ ಸ್ಕ್ರ್ಯಾಚ್ ಕಾರ್ಡ್ ಗೀಚುತ್ತಿದ್ದಂತೆ, ಅವರಿಗೆ “ನೋ ಚೇರ್ ನವೆಂಬರ್” ಬಹುಮಾನವಾಗಿ ಸಿಗುತ್ತದೆ. ನಂತರ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ನಗುತ್ತಿರುವುದು ಕಂಡುಬರುತ್ತದೆ.





















































 
 

ಬಿಹಾರ ಚುನಾವಣೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಂಪುಟ ಪುನರ್‌ರಚನೆ ಕುರಿತು ಚರ್ಚಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಬಿಹಾರ ಚುನಾವಣೆಯ ನಂತರ ರಾಹುಲ್ ಗಾಂಧಿ ಮತ್ತು ಖರ್ಗೆ ಅವರೊಂದಿಗೆ ಸಂಪುಟ ಪುನರ್‌ಚನೆ ಕುರಿತು ಚರ್ಚಿಸುತ್ತೇನೆ, ಜನರು ಏನು ಬೇಕಾದರೂ ಹೇಳಬಹುದು. ಹೈಕಮಾಂಡ್ ಯಾರು? ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅಥವಾ ಮಲ್ಲಿಕಾರ್ಜುನ ಖರ್ಗೆ ಏನಾದರೂ ಹೇಳಿದ್ದಾರೆಯೇ? ಜನರಿಗಿಂತ ಹೆಚ್ಚಾಗಿ, ಮಾಧ್ಯಮಗಳು ಇದರ ಬಗ್ಗೆ ಚರ್ಚಿಸುತ್ತಿವೆ. ಹೈಕಮಾಂಡ್ ಹೊರತುಪಡಿಸಿ, ಇತರರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

error: Content is protected !!
Scroll to Top