Dr. UPSಗೆ ಅರೆಭಾಷೆ ಫೆಲೋಶಿಪ್

ಮಡಿಕೇರಿ: ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರತಿಷ್ಠಿತ “ಅಕಾಡೆಮಿ ಪ್ರಶಸ್ತಿ’ಗೆ Dr. UPS ಎಂದು ಖ್ಯಾತಿ ಪಡೆದಿರುವ, ವೈದ್ಯರಾಗಿ, ಸಾಮಾಜಿಕ ಹೋರಾಟಗಾರರಾಗಿ, ಪತ್ರಕರ್ತರಾಗಿ ಹೆಸರು ಮಾಡಿರುವ ಡಾ. ಯು.ಪಿ. ಶಿವಾನಂದ ಆಯ್ಕೆಯಾಗಿದ್ದಾರೆ. ನವೆಂಬರ್ 30ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿ ಪ್ರದಾನವಾಗಲಿದೆ.

ಕಳಕಳಿಯ ವೈದ್ಯ
1980ರ ದಶಕದಲ್ಲಿ ಸುಳ್ಯದಲ್ಲಿ ಗಾಯತ್ರಿ ನರ್ಸಿಂಗ್ ಹೋಮ್ ಮೂಲಕ ವೈದ್ಯಕೀಯ ಸೇವೆ ಆರಂಭಿಸಿದ್ದ ಶಿವಾನಂದರು ಸುಳ್ಯ ತಾಲೂಕಿನ ಹಳ್ಳಿಗಳಿಗೆ ತಮ್ಮ ಜೀಪ್ ಮೂಲಕ ತೆರಳಿ ಮನೆಬಾಗಿಲಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದರು.

ಸಾಮಾಜಿಕ ಹೋರಾಟಗಾರ
ಸುಳ್ಯದಲ್ಲಿ ಮಾಯಿಲಪ್ಪ ಗೌಡ ಕೊಲೆ ಪ್ರಕರಣ ಸಂಬಂಧವಾಗಿ ಖಾಕಿ ವಿರುದ್ಧ ಸಿಡಿದೆದ್ದು ನಡುರಸ್ತೆಯಲ್ಲಿ ಹೋರಾಟ ಮಾಡಿದ್ದರು.





















































 
 

ಸುದ್ದಿ ಬಿಡುಗಡೆಯ ಸ್ಥಾಪಕ
ಮಾಧ್ಯಮ ಲೋಕಕ್ಕೆ ಕಾಲಿಟ್ಟ ಇವರು ಕಳೆದ ನಾಲ್ಕು ದಶಕಕ್ಕೂ ಮಿಕ್ಕಿದ ಸುದೀರ್ಘ ಅವಧಿಯಿಂದ ಸುದ್ದಿ ಬಿಡುಗಡೆ ಪತ್ರಿಕೆಯನ್ನು ನಡೆಸುತ್ತಾ ಬಂದಿದ್ದಾರೆ.

error: Content is protected !!
Scroll to Top