ಹರಿಯಾಣದ ಆಸ್ಪತ್ರೆಯಿಂದ 360 ಆರ್‌ಡಿಎಕ್ಸ್‌ ಸ್ಫೋಟಕ ವಶ

ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಇಬ್ಬರು ಡಾಕ್ಟರ್‌ಗಳು ಸೆರೆ

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ಪರಿಯಾಣದ ಫರಿದಾಬಾದ್‌ನ ಆಸ್ಪತ್ರೆಯೊಂದಕ್ಕೆ ದಾಳಿ ಮಾಡಿರುವ ಪೊಲೀಸರು 360 ಕಿ.ಗ್ರಾಂ ಆರ್‌ಡಿಎಕ್ಸ್‌ ಸ್ಫೋಟಕ ಮತ್ತು ಒಂದು ಎ.ಕೆ. 47 ರೈಫಲ್‌ ವಶಪಡಿಸಿಕೊಂಡು ಇಬ್ಬರು ಡಾಕ್ಟರ್‌ಗಳನ್ನು ಬಂಧಿಸಿದ್ದಾರೆ. ದೇಶದಲ್ಲಿ ಇನ್ನೊಂದು ಬೃಹತ್‌ ವಿಧ್ವಂಸಕ ಕೃತ್ಯವನ್ನು ಈ ಮೂಲಕ ಪೊಲೀಸರು ವಿಫಲಗೊಳಿಸಿದ್ದಾರೆ.

ಫರಿದಾಬಾದ್‌ನ ಅಲ್‌ ಫಲಾಹ ಆಸ್ಪತ್ರೆಯಿಂದ ಈ ಬೃಹತ್‌ ಪ್ರಮಾಣದ ಅಪಾಯಕಾರಿ ಸ್ಫೋಟಕವನ್ನು ಜಮ್ಮು-ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಸೆರೆಯಾದ ಡಾಕ್ಟರ್‌ ನೀಡಿದ ಸುಳಿವಿನಂತೆ ಅಲ್‌ ಫಲಾಹ ಆಸ್ಪತ್ರಗೆ ದಾಳಿ ಮಾಡಿದ್ದರು. ಇದು ಇತ್ತೀಚೆಗಿನ ವರ್ಷಗಳಲ್ಲಿ ದೇಶದಲ್ಲಿ ವಶವಾಗಿರುವ ಬೃಹತ್‌ ಪ್ರಮಾಣದ ಆರ್‌ಡಿಎಕ್ಸ್‌ ಸ್ಫೋಟಕ ಎನ್ನಲಾಗಿದೆ. ಈ ಹಿಂದೆ 1993ರಲ್ಲಿ ಮುಂಬಯಿಯಲ್ಲಿ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟಕ್ಕೆ ಇದೇ ಮಾದರಿಯಲ್ಲಿ ಆರ್‌ಡಿಎಕ್ಸ್‌ ತಂದು ದಾಸ್ತಾನು ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇನ್ನೊಂದು ಬೃಹತ್‌ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತೆ ಎಂಬ ಅನುಮಾನ ಬಂದಿದೆ.





















































 
 

ಡಾ.ಅದೀಲ್‌ ಅಹ್ಮದ್‌ ರಾಥೆರ್‌ ಮತ್ತು ಡಾ.ಮುಜಾಮಿಲ್‌ ಶಕಿಲ್‌ ಸೆರೆಯಾಗಿರುವ ವೈದ್ಯರು. ಡಾ.ಅದೀಲ್‌ ಅಹ್ಮದ್‌ ರಾಥೆರ್‌ನನ್ನು ಕಾಶ್ಮೀರ ಪೊಲೀಸರು ಶ್ರೀನಗರದಲ್ಲಿ ಬಂಧಿಸಿದ್ದರು. ಅವನು ನೀಡಿದ ಸುಳಿವಿನ ಪ್ರಕಾರ ಹರಿಯಾಣದಲ್ಲಿ ಆಸ್ಪತ್ರೆಗೆ ದಾಳಿ ಮಾಡಲಾಗಿತ್ತು. ಡಾ.ಮುಜಾಮಿಲ್‌ ಶಕಿಲ್‌ ಈ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದಾನೆ. ಈತನೂ ಕಾಶ್ಮೀರ ಮೂಲದವ ಎಂದು ಪೊಲೀಸರು ತಿಳಿಸಿದ್ದಾರೆ.

ಡಾ.ಅದೀಲ್‌ ಅಹ್ಮದ್‌ ರಾಥೆರ್‌ನ್ನು ವಿಚಾರಣೆ ನಡೆಸಿದಾಗ ಶಸ್ತಾರಸ್ತ್ರ ಸಾಗಾಟ ಮತ್ತು ದಾಸ್ತಾನಿನ ಬಗ್ಗೆ ಮಾಹಿತಿ ನೀಡಿದ್‌ದ. ಆ ಪ್ರಕಾರ ಪೊಲೀಸರು ಹರಿಯಾಣದ ಆಸ್ಪತ್ರೆಗೆ ದಾಳಿ ಮಾಡಿದ್ದರು. ಇಬ್ಬರು ವೈದ್ಯರನ್ನು ಕಾಶ್ಮೀರಕ್ಕೆ ಕರೆತಂದು ಹೆಚ್ಚಿನ ವಿಚಾರಣೆಗೆ ಗುರಿಪಡಿಸಲಾಗಿದೆ.

error: Content is protected !!
Scroll to Top