KRGಗೆ ಅರೆಭಾಷೆ ಫೆಲೋಶಿಪ್

ಮಡಿಕೇರಿ: ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರತಿಷ್ಠಿತ “ಅಕಾಡೆಮಿ ಪ್ರಶಸ್ತಿ’ಗೆ KRG ಎಂದೇ ಜನಮಾನಸದಲ್ಲಿ ಪ್ರತೀತಿ ಪಡೆದಿರುವ ನಿವೃತ್ತ ಪ್ರಾಂಶುಪಾಲ, ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕೆ. ಆರ್. ಗಂಗಾಧರ್ ಆಯ್ಕೆಯಾಗಿದ್ದಾರೆ. ನವೆಂಬರ್ 30ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿ ಪ್ರದಾನವಾಗಲಿದೆ.

ಅರೆಭಾಷೆ ನಿಘಂಟುವಿನ ಕರ್ತೃ
ಅರೆಭಾಷೆಯ ಪದಕೋಶವೊಂದನ್ನು ರಚಿಸುವ ಮೂಲಕ ಅರೆಭಾಷೆಯ ಅಸ್ಮಿತೆ ಮತ್ತು ಅಸ್ತಿತ್ವಗಳಿಗೆ ಗಣನೀಯ ಕೊಡುಗೆಯೊಂದನ್ನು ನೀಡಿದವರು ಕೆ.ಆರ್. ಜಿ. ಜೊತೆಗೆ ‘ಸಾಧನಾ ಶೃಂಗ” ಎಂಬ ಕೃತಿಯನ್ನು ರಚಿಸಿ ಅದರಲ್ಲಿ ಸುಳ್ಯ ಮತ್ತು ಸುತ್ತಲ ನೂರು ಸಾಧಕರ ಪರಿಚಯವನ್ನು ಸಾರಸ್ವತ ಲೋಕದ ಮುಂದೆ ತೆರೆದಿಟ್ಟಿದ್ದರು.

ಜೇಸೀ ರಾಜ್ಯ ತರಬೇತುದಾರ
ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತಿ ಸಂಸ್ಥೆಯ ಸುಳ್ಯದ ಘಟಕೆವಾದ ಜೇಸೀಐನ ಪೂರ್ವಾಧ್ಯಕ್ಷರಾಗಿ ದೊಡ್ಡ ಹೆಸರು ಮಾಡಿದ್ದ ಇವರು. ಜೇಸೀಐನಲ್ಲಿ ರಾಜ್ಯ ತರಬೇತುದಾರರಾಗಿ ಸಾವಿರಾರು ತರಬೇತಿಗಳನ್ನು ನೀಡಿದ ಅನುಭವಿ ಇವರು.





















































 
 

ಪತ್ನಿ ಪಾರ್ವತಿ (ಶಾಂತಿ)ಯವರೊಂದಿಗೆ ಅರಂತೋಡಿನ ‘RamGiri Farms’ನಲ್ಲಿ ಇವರ ವಾಸ. ಪುತ್ರಿ ಡಾ. ನಮ್ರತಾ ಮತ್ತು ಅಳಿಯ ಡಾ. ದಿನೇಶ್ ವೈದ್ಯಕೀಯ ಸೇವೆ ನೀಡುತ್ತಿದ್ದರೆ ಮಗ ಹರಿಚರಣ್ ಸುಳ್ಯದಲ್ಲಿ ಮಾಸ್ಟರ್ ಮೆಡಿಕಲ್ಸ್ ನಡೆಸುತ್ತಿದ್ದಾರೆ. ಸೊಸೆ ಸೌಮ್ಯಾ ಉಪನ್ಯಾಸಕಿಯಾಗಿದ್ದಾರೆ.

error: Content is protected !!
Scroll to Top