ಯೋಗ್ಯತೆಗಿಂತ ಯೋಗ ಮುಖ್ಯ. ಜನ್ಮ ದಿನದ ಸ್ವರ್ಣ ಸಂಭ್ರಮದಲ್ಲಿ SRK ಕೇಶವ ಅಮೈ

ಕೊಯ್ಲ: ಇಲ್ಲಿನ ಕಲಾಯಿಗುತ್ತು ಮನೆಯಲ್ಲಿ SRK Laddersನ ಕೇಶವ ಅಮೈ ಅವರ 50ನೇ ಹುಟ್ಟುಹಬ್ಬ ಅದ್ದೂರಿಯಾಗಿ ನಡೆಯಿತು.

ಚಿತ್ರದೊಳಗೆ ಕೇಶವ
ಮೈಸೂರಿನಲ್ಲಿ ಚಿತ್ರಕಲಾ ಶಿಕ್ಷಕರಾದ ಲಕ್ಷ್ಮೀನಾರಾಯಣ ಅವರು ಕೇಶವರನ್ನು ವೇದಿಕೆಯಲ್ಲಿ ಕುಳ್ಳಿರಿಸಿ ಹಾಡೊಂದು ಸಾಗಿಬಂದ ಆರೆಂಟು ನಿಮಿಷಗಳಲ್ಲಿ ಕೇಶವರ ಕ್ಯಾನ್ವಾಸ್ ಚಿತ್ರ ರಚಿಸಿದ್ದು ವಿಶೇಷವಾಗಿತ್ತು.

AI touch
ಈಗಿನ ಆಪ್ತ ತಾಂತ್ರಿಕತೆಯಾಗಿರುವ ಕೃತಕ ಬುದ್ಧಿಮತ್ತೆ (Artificial Intelligence) ವಿಶೇಷ ರೀತಿಯಲ್ಲಿ ಪ್ರಕಟಗೊಂಡದ್ದು ವಿಶೇಷವಾಗಿತ್ತು. ಕೇಶವರ ಜೀವಮಾನದ ಸಾಧನೆಯ ಕುರಿತಾಗಿ ರಚನೆಯಾಗಿದ್ದ ಹಾಡಿಗೆ AI ಮೂಲಕ ರಾಗ, ಗಾಯನ ಮತ್ತು ಸಂಗೀತ ಅಳವಡಿಸಲಾಗಿತ್ತು.





















































 
 

ಚೇತನ್ ಆನೆಗುಂಡಿ ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಭ್ರಮದ ಕೇಕ್ ಕಟ್ಟಿಂಗ್, ಪಟಾಕಿ ಸಿಡಿಸುವಿಕೆ, ಮನರಂಜನೆ ಎಲ್ಲವೂ ಸಮ್ಮಿಲನಗೊಂಡಿತ್ತು.

ಅಂತರಂಗ – ಬಹಿರಂಗ
ಕಾರ್ಯಕ್ರಮದ ಮಧ್ಯೆ ಕೇಶವರಿಗೆ ನಿರೂಪಕರು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅವರು ಅವರ ಜೀವನದ ‘ಹೇಳದ ಕತೆ’ಗಳನ್ನು (untold story) ಬಿಚ್ಚಿಟ್ಟದ್ದು ಹೃದ್ಯವಾಗಿತ್ತು.

ಸುಗ್ರಾಸ ಭೋಜನ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. 500ಕ್ಕೂ ಮಿಕ್ಕಿದ ಕೇಶವಾಭಿಮಾನಿಗಳು ಉಪಸ್ಥಿತರಿದ್ದರು.

error: Content is protected !!
Scroll to Top