ಪುತ್ತೂರು: ಮಾನವನ ದೇಹಕ್ಕೆ ಸಾವಿದೆ ಆದರೆ ಕಣ್ಣಿಗೆ ಸಾವಿಲ್ಲ ಎಂಬಂತೆ SRK ಲ್ಯಾಡರ್ಸ್ನ ಮಾಲಕ ಕೇಶವ್ ಅಮೈ ಮತ್ತು ಅವರ 66 ಸಿಬ್ಬಂದಿ ಕೇಶವ್ ಅವರ ಜನ್ಮದಿನವನ್ನು ನೇತ್ರದಾನ ಪತ್ರಕ್ಕೆ ಸಹಿ ಹಾಕುವ ಮೂಲಕ ವಿಶೇಷವಾಗಿ ಆಚರಿಸಿದರು.
ಕೇಶವ್ ಅಮೈ ಅವರ ಜನ್ಮದಿನದ ಪ್ರಯುಕ್ತ ಸಂಸ್ಥೆಯಲ್ಲಿ ನೇತ್ರ ದಾನ ನೋಂದಣಿ ಶಿಬಿರ ಆಯೋಜಿಸಿದ್ದು, ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ನೇತ್ರ ದಾನ ಪತ್ರಕ್ಕೆ ಸಹಿ ಹಾಕಿದರು.
ಹಾಗೆಯೇ ಅಡಿಕೆಯನ್ನು ಗೊನೆಯಿಂದ ಬಿಡಿಸುವ ಮತ್ತು ಕಾಳುಮೆಣಸು ಸ್ವಚ್ಛಗೊಳಿಸುವ ಯಂತ್ರಗಳ ಲೋಕಾರ್ಪಣೆ ನಡೆಯಿತು. ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿ ಸೋಜ ಅವರು ಅಡಿಕೆ ಬಿಡಿಸುವ ಯಂತ್ರವನ್ನು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ಲು ಅವರು ಕಾಳುಮೆಣಸು ಸ್ವಚ್ಛಗೊಳಿಸುವ ಯಂತ್ರವನ್ನು ಉದ್ಘಾಟಿಸಿದರು. ನಂತರ, ಬೀರುಮಲೆಯಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ಎಸ್.ಆರ್.ಕೆ. ಲ್ಯಾಡರ್ಸ್ ವತಿಯಿಂದ ನೀಡಲಾದ ನೆಟ್ ಬೇಲಿಯನ್ನು ನಿವೃತ್ತ ಯುವಜನಸೇವಾ ಕ್ರೀಡಾಧಿಕಾರಿ ಮಾಧವ ಬಿ.ಕೆ ಅವರು ಉದ್ಘಾಟಿಸಿದರು.
























