ಬೆಳಗಾವಿ: ಸತತ ಎಂಟು ದಿನಗಳಿಂದ ಕಬ್ಬು ಬೆಳೆಗಾರರು ಜಿಲ್ಲೆಯಲ್ಲಿ ಹೋರಾಟ ನಡೆಸುತ್ತಿದ್ದು, ಪ್ರತಿ ಟನ್ ಕಬ್ಬಿಗೆ ಮೂರೂವರೆ ಸಾವಿರ ರೂ. ದರ ನಿಗದಿ ಮಾಡುವ ಬಗಾಗೆ ಸರ್ಕಾರ ಸ್ಪಷ್ಟ ನಿರ್ಧಾರ ತಾಳುವವರೆಗೂ ಹೋರಾಟ ಹಿಂಪಡೆಯುವ ಮಾತೇ ಇಲ್ಲ ಎಂದು ಸಂದೇಶ ರವಾನೆ ಮಾಡಿದ್ದಾರೆ.
ನ.6 ರೊಳಗಾಗಿ ಸರ್ಕಾರ ನಿರ್ಣಯ ತಿಳಿಸದಿದ್ದಲ್ಲಿ ನ.7 ರಿಂದ ರಾಷ್ಟ್ರೀಯ ಹೆದ್ದಾರಿ ತಡೆ ಚಳುವಳಿ ನಡೆಸುವ ಎಚ್ಚರಿಕೆಯನ್ನೂ ಕಬ್ಬು ಬೆಳೆಗಾರರು ನೀಡಿದ್ದಾರೆ.
























