ಗುರುನಾನಕ್ ಜನ್ಮಜಯಂತಿ: ಶುಭ ಕೋರಿದ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್

ನವದೆಹಲಿ: ಸಿಖ್ ಗುರು ಗುರುನಾನಕ್ ಅವರ ಜನ್ಮಜಯಂತಿಯ ಪ್ರಯುಕ್ತ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಅವರು ಶುಭ ಕೋರಿ, ಗುರುನಾನಕ್ ಅವರ ತತ್ವಗಳನ್ನು ಸ್ಮರಿಸಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಶ್ರೀ ಗುರುನಾನಕ್ ದೇವ್ ಜಿ ಅವರ ಜೀವನ ಮತ್ತು ಬೋಧನೆಗಳು ಸತ್ಯ, ಸಮಾನತೆ, ಕರುಣೆ ಮತ್ತು ನಿಸ್ವಾರ್ಥ ಸೇವೆಯ ಶಾಶ್ವತ ಮೌಲ್ಯಗಳಿಂದ ಜಗತ್ತನ್ನು ಬೆಳಗಿಸುತ್ತಿವೆ ಎಂದಿದ್ದಾರೆ.

ಗುರುನಾನಕ್ ಅವರ ದೈವಿಕ ಸಂದೇಶವು ಕಾಲವನ್ನು ಮೀರಿದ್ದು, ಮಾನವೀಯತೆಯು ಶಾಂತಿ, ಸದಾಚಾರ ಮತ್ತು ಸಾಮರಸ್ಯದ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ‌.





















































 
 

error: Content is protected !!
Scroll to Top