ಮಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಎಫ್‌ಬಿ ಖಾತೆ

ಮಂಗಳೂರು: ದುಷ್ಕರ್ಮಿಯೊಬ್ಬ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ‌ನಕಲಿ ಖಾತೆ ತೆರೆದಿರುವ ಬಗ್ಗೆ ವರದಿಯಾಗಿದೆ.

ಕೆಲ ದಿನಗಳ ಹಿಂದೆಯೇ ಈ ಖಾತೆ ತೆರೆಯಲಾಗಿದ್ದು, ಅದರಲ್ಲಿ ಈಗಾಗಲೇ ಕೆಲವು ಮಂದಿ ಸ್ನೇಹಿತರಾಗಿರುವುದು ‌ಸಹ ಕಂಡು ಬಂದಿದೆ.

ಈ ಸಂಬಂಧ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ತಕ್ಷಣವೇ ಫೇಸ್‌ಬುಕ್ ಸಂಸ್ಥೆಗೆ ರಿಪೋರ್ಟ್ ಮಾಡಿದ್ದಾಗಿ ತಿಳಿದು ಬಂದಿದೆ.





















































 
 
error: Content is protected !!
Scroll to Top