ತೆಲಂಗಾಣ ಅಪಘಾತದಲ್ಲಿ ಮೂವರು ಒಡಹುಟ್ಟಿದ ಸಹೋದರಿಯರು ಸಾವು

ಜಲ್ಲಿ ಸಾಗಿಸುತ್ತಿದ್ದ್‌ ಟ್ರಕ್‌ ಬಸ್ಸಿನ ಮೇಲೆ ಮಗುಚಿಬಿದ್ದು ಸಂಭವಿಸಿದ ಭೀಕರ ದುರಂತ

ಹೈದರಾಬಾದ್ : ತೆಲಂಗಾಣದಲ್ಲಿ ಸೋಮವಾರ ಬೆಳಗ್ಗೆ ಜಲ್ಲಿ ಸಾಗಿಸುತ್ತಿದ್ದ ಟ್ರಕ್‌ ಬಸ್ಸಿನ ಮೇಲೆ ಮಗುಚಿಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಒಡಹುಟ್ಟಿದ ಮೂವರು ಸಹೋದರಿಯರು ಕೂಡ ಸಾವನ್ನಪ್ಪಿದ್ದಾರೆ. ಮನೆಗೆ ಬೆಳಕಾಗಿದ್ದ ಮೂವರು ಹೆಣ್ಣುಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಾಗಿದೆ.

ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಈ ಅಪಘಾತದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಯಲ್ಲಯ್ಯ ಗೌಡ ಎಂಬವರ ಮೂವರು ಹೆಣ್ಣುಮಕ್ಕಳು ಕೂಡ ಸಾವನ್ನಪ್ಪಿದ್ದಾರೆ. ತನುಷಾ, ಸಾಯಿಪ್ರಿಯಾ ಮತ್ತು ನಂದಿನಿ ಮೃತಪಟ್ಟವರು. ಎಲ್ಲರೂ ಕಾಲೇಜು ವಿದ್ಯಾರ್ಥಿಗಳು.





















































 
 

ಇತ್ತೀಚೆಗಷ್ಟೇ ಕುಟುಂಬದ ಹಿರಿಯ ಮಗಳು ಅನುಷಾರ ಮದುವೆಯಾಗಿತ್ತು. ವಾರಾಂತ್ಯದಲ್ಲಿ ಹೈದರಾಬಾದ್‌ನಲ್ಲಿ ಓದುತ್ತಿದ್ದ ಹುಡುಗಿಯರು ತಂದೂರಿನಲ್ಲಿ ಮತ್ತೊಂದು ಮದುವೆಗೆಂದು ಬಂದಿದ್ದರು. ತಂದೆ ಬರಬೇಡಿ ಎಂದೇ ಹೇಳಿದ್ದರೂ ತಾಯಿಯ ಒತ್ತಾಯದಿಂದ ಅವರು ಬಂದಿದ್ದರು. ಭಾನುವಾರ ಹೋಗಬೇಡಿ ಸೋಮವಾರ ಬೆಳಗಿನ ಜಾವ ಬೇಗ ಹೊರಟುಬಿಡಿ ಎಂದು ಎಷ್ಟೇ ಕೇಳಿಕೊಂಡರು ಉಳಿಯಲು ಮಕ್ಕಳು ಸಿದ್ಧರಿರಲಿಲ್ಲ.

ರೈಲು ಸಿಕ್ಕಿಲ್ಲವೆಂದು ಬಸ್ಸಿಗೆ ಬಿಡಲು ಬಂದಾಗ ಎಲ್ಲರೂ ಬಸ್ ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದರು. ಮೂವರೂ ಈ ನತದೃಷ್ಟ ಬಸ್‌ ಏರಿದ್ದು, ಅದೇ ಅವರ ಪಾಲಿಗೆ ಕೊನೆಯ ಪ್ರಯಾಣವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

33 ವರ್ಷದ ಸಾಲಿಹಾ ಬೇಗಂ ಕುಟುಂಬದ ಕತೆ ಕೂಡ ಇದೆ. ಸಾಲಿಹಾ ತನ್ನ ಮೂರು ತಿಂಗಳ ಮಗುವಿನೊಂದಿಗೆ ಅಜ್ಜಿಯನ್ನು ಭೇಟಿಯಾಗಲು ಹೈದರಾಬಾದ್​ಗೆ ಪ್ರಯಾಣಿಸುತ್ತಿದ್ದರು. ಜಲ್ಲಿ ರಾಶಿಯೊಳಗೆ ಇಬ್ಬರ ದೇಹವೂ ಪತ್ತೆಯಾಗಿದೆ. ತಾಯಿ ಮಗುವನ್ನು ಅಪ್ಪಿಕೊಂಡೇ ಇದ್ದರು.

error: Content is protected !!
Scroll to Top