ಹಿಂದೂ ದೇವರುಗಳ ಅವಹೇಳನ: ಬಾಲಕಿ ಮತ್ತಾಕೆಯ ಪೋಷಕರು ಅರೆಸ್ಟ್

ಲಕ್ನೋ: ಉತ್ತರ ಪ್ರದೇಶದಲ್ಲಿ ಹಿಂದೂ ದೇವತೆಗಳನ್ನು ಅವಹೇಳನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ‌ಮಾಡಿದ ಬಾಲಕಿಯನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದ್ದು, ಆಕೆಯ ಪೋಷಕರನ್ನು ಬಂಧಿಸಲಾಗಿದೆ.

ತನ್ನ ಇನ್ಸ್ಟಾಗ್ರಾಮ್ ಫಾಲೇವರ್ಸ್ ಸಂಖ್ಯೆ ಹೆಚ್ಚಬೇಕು ಎನ್ನುವ ಉದ್ದೇಶದಿಂದ ಬಾಲಕಿ ಈ ಕೃತ್ಯ ಎಸಗಿದ್ದಳು. ಒಂದು ನಿಮಿಷದ ವಿಡಿಯೋದಲ್ಲಿ ಆಕೆ ಹಿಂದೂ ದೇವರನ್ನು ಟೀಕೆ ಮಾಡಿದ್ದಳು. ಅವಳ ಈ ಕೃತ್ಯಕ್ಕೆ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಆಕೆಯ ಮತ್ತು ಅವಳ ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ದೂರು ದಾಖಲಿಸಿದ್ದವು.

ದೂರನ್ನಾಧರಿಸಿ ಬಾಲಕಿಯನ್ನು ಬಾಲಾಪರಾಧಿ ಗೃಹಕ್ಕೆ ಕಳಿಸಲಾಗಿದ್ದು, ಆಕೆಯ ಪೋಷಕರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಓರ್ವ ವ್ಯಕ್ತಿ ಪರಾರಿಯಾಗಿದ್ದಾನೆ. ಆತನ ವಿರುದ್ದ ಸಹ ಪ್ರಕರಣ ದಾಖಲಾಗಿದೆ.





















































 
 
error: Content is protected !!
Scroll to Top