RJD ವಿರುದ್ಧ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಆಕ್ರೋಶ

ಪಾಟ್ನಾ: ಬಿಹಾರದಲ್ಲಿ ‌ಮಹಿಳೆಯರನ್ನು ಅಸಹಾಯಕತೆ ಮತ್ತು ಭಯದ ನೆರಳಿನಿಂದ ಎನ್.ಡಿ.ಎ. ಸರ್ಕಾರ ಮೇಲಕ್ಕೆತ್ತಿದೆ ಎಂದು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಬಿಹಾರದಲ್ಲಿ RJD ಯು ಮಹಿಳಾ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಸ್ಥಗಿತ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವುದು ನೋವಿನ ಸಂಗತಿ. ಬಿಹಾರದಲ್ಲಿ ಜನ ಧನ ಯೋಜನೆಯು 3 ಕೋಟಿಗೂ ಅಧಿಕ ಜನರಿಗೆ ಅನುಕೂಲಗಳನ್ನು ಒದಗಿಸಿದೆ. ಉಜ್ವಲ ಯೋಜನೆಯಡಿ 1.16 ಕೋಟಿಗೂ ಅಧಿಕ ಮಹಿಳೆಯರು ಪ್ರಯೋಜನಗಳನ್ನು ಪಡೆದಿದ್ದಾರೆ. ಪ್ರತಿ ಮನೆಗಳಲ್ಲೂ ಶೌಚಾಲಯ ನಿರ್ಮಾಣ ಕಾರ್ಯ ನಡೆದಿದೆ ಎಂದು ಇರಾನಿ ತಿಳಿಸಿದ್ದಾರೆ.

NDA ಸರ್ಕಾರ ಬಿಹಾರದಲ್ಲಿ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸುತ್ತಿದ್ದರೆ, ಇನ್ನೊಂದೆಡೆ ಆರ್‌ಜೆಡಿ ನಾಯಕರು ಈ ಪ್ರಯೋಜನಗಳನ್ನು ಸ್ಥಗಿತಗೊಳಿಸಲು ಚುನಾವಣಾ ಆಯೋಗಕ್ಕೆ ಲಿಖಿತ ಪ್ರಸ್ತಾವನೆಯನ್ನು ನೀಡಿದ್ದಾರೆ ಎಂಬುದು ನೋವಿನ ಸಂಗತಿ ಎಂದು ಹೇಳಿದರು.





















































 
 
error: Content is protected !!
Scroll to Top