ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಡಾ. ಕೆ ವಿ ರೇಣುಕಾಪ್ರಸಾದ್ ಮತ್ತು ಮನೆಯವರು ಹರಕೆಯ ರೂಪದಲ್ಲಿ ಸಮರ್ಪಿಸಲಿರುವ ಬೆಳ್ಳಿರಥ ಉಚ್ಚಿಲದ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಆಗಮಿಸಿದಾಗ ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ವಿಧಾನ ಪರಿಷತ್ ಶಾಸಕರಾದ ಯಶ್’ಪಾಲ್ ಸುವರ್ಣ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾದ ಗಿರಿಧರ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಕುಮಾರ್ ವೈ. ಮತ್ತು ನೂರಾರು ಭಕ್ತರು ಹಾಜರಿದ್ದರು.
ಇದಕ್ಕೂ ಮೊದಲು ಕೋಟೇಶ್ವರದಿಂದ ಹೊರಟ ರಥಯಾತ್ರೆಯು ಸಾಸ್ತಾನ, ಬ್ರಹ್ಮಾವರ, ಸಂತೆಕಟ್ಟೆ, ಕರಾವಳಿ ಸರ್ಕಲ್ ಮುಂತಾದೆಡೆಗಳಲ್ಲಿ ಆಗಮಿಸಿದಾಗ ಸಾರ್ವಜನಿಕರು ಅದ್ದೂರಿ ಸ್ವಾಗತ ನೀಡಿದ್ದರು.
ಉಚ್ಚಿಲದಿಂದ ಹೊರಟ ಯಾತ್ರೆಯು ಮುಂದೆ ಪಡುಬಿದ್ರಿಗೆ ಬಂದಾಗ ಅಲ್ಲಿಯೂ ಭಕ್ತಿಪೂರ್ವಕ ಸ್ವಾಗತ ದೊರೆಯಿತು. ಎಲ್ಲಾ ಕಡೆಗಳಲ್ಲೂ ಡಾ. ಕೆ ವಿ ರೇಣುಕಾಪ್ರಸಾದ್ ಅವರು ಗಣ್ಯರಿಗೆ ಬೆಳ್ಳಿರಥದ ಶಾಲು ಅರ್ಪಿಸಿ ಗೌರವಿಸಿದರು.
























