ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಕ್ಷಿಣ ಭಾರತದ ಭಾಷೆಗಳ ಶ್ರೀಮಂತಿಕೆ ಮತ್ತು ಸಾಂಸ್ಕೃತಿಕ ವೈಭವವನ್ನು ಶ್ಲಾಘಿಸಿದ್ದಾರೆ. ವಿಶೇಷವಾಗಿ ಕನ್ನಡ ಮತ್ತು ತುಳು ಭಾಷೆಗಳ ಸಾಂಸ್ಕೃತಿಕ ಶ್ರೀಮಂತಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಖಾಸಗಿ ಮಾಧ್ಯಮದ ಜೊತೆಗೆ ಮಾತನಾಡಿರುವ ಅವರು, ಕನ್ನಡ ಭಾಷಾ ಶಕ್ತಿ ಅದ್ಭುತ. ಕನ್ನಡದ ಆಳವಾದ ಆಧ್ಯಾತ್ಮಿಕತೆಯನ್ನು ದಾಸ ಸಾಹಿತ್ಯ, ಕೀರ್ತನೆಗಳು ಪ್ರತಿಬಿಂಬಿಸುತ್ತವೆ. ನಾನು ತುಳು ಭಾಷೆಯನ್ನು ಸಹ ಇಷ್ಟಪಡುತ್ತಿದ್ದು, ಅದು ಅದರ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕನ್ನಡ ಮತ್ತು ತುಳು ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಾದ ತಮಿಳು, ಮಲಯಾಳಂ, ತೆಲುಗು ಮೊದಲಾದ ಭಾಷೆಗಳನ್ನು ಉಲ್ಲೇಖಿಸಿ ಶ್ಲಾಘಿಸಿದ್ದಾರೆ. ದಕ್ಷಿಣ ಭಾರತದ ಭಾಷೆಗಳು ಸಂವಹನ ಮಾಧ್ಯಮಗಳು ಮಾತ್ರವೇ ಅಲ್ಲ ಬದಲಾಗಿ ಜನಾಂಗದ ಇತಿಹಾಸ, ಕಲೆ, ಭಾವನೆಗಳ ಪ್ರತಿಬಿಂಬ ಎಂದು ಅಭಿಪ್ರಾಯಪಟ್ಟಿದ್ದಾರೆ.
























