ಕಲಬೆರಕೆ ಶೇಂದಿ ಸೇವನೆ: 15 ಜನರು ಅಸ್ವಸ್ಥ

ತುಮಕೂರು: ಕಲಬೆರಕೆ ಶೇಂದಿ ಸೇವಿಸಿ 15 ಮಂದಿ ಅಸ್ವಸ್ಥರಾದ ಘಟನೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಆಂಧ್ರ ಗಡಿ ಭಾಗದಲ್ಲಿ ನಡೆದಿದೆ.

ಅಸ್ವಸ್ಥರಾದವರಲ್ಲಿ ‌ತೆರಿಯೂರು ಗ್ರಾಮದ 10 ಮಂದಿ ಮತ್ತು ಆಂಧ್ರದ ಚೋಳೂರು ಗ್ರಾಮದ 5 ಮಂದಿ ಸೇರಿದ್ದು, ಇವರಲ್ಲಿ ಇಬ್ಬರು ಗಂಭೀರವಾಗಿದ್ದಾರೆ. ಅಸ್ವಸ್ಥರನ್ನು ಹಿರಿಯೂರು ಮತ್ತು ಬೆಂಗಳೂರಿನ ಆಸ್ಪತ್ರೆ ಗಳಿಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಘಟನಾ ‌ಸ್ಥಳಕ್ಕೆ ಕೊಡಿಗೇನಹಳ್ಳಿ ಮತ್ತು ಆಂಧ್ರದ ಚೋಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





















































 
 
error: Content is protected !!
Scroll to Top