ರಾಜ್ಯೋತ್ಸವದಂದು ಒಂದು ಹೃದಯೋತ್ಸವ

ಪುತ್ತೂರು: ಇಡೀ ಕರ್ನಾಟಕದಂತೆ ಪುತ್ತೂರು ಸಹ ರಾಜ್ಯೋತ್ಸವದ ಗುಂಗಿನಲ್ಲಿತ್ತು, ನವೆಂಬರ್ 1ನೇ ಶನಿವಾರದಂದು. ಆದರೆ ನತದೃಷ್ಟ ಕುಟುಂಬವೊಂದು ವಾಹನಾಪಘಾತದಲ್ಲಿ ಸಿಲುಕಿ ನೆರವಿಗಾಗಿ ರೋದಿಸುತ್ತಿತ್ತು.

ಹೌದು, ಪರ್ಪುಂಜದ Abroad Auditorium ಬಳಿ ವೇಗವಾಗಿ ಬರುತ್ತಿದ್ದ ಕಾರೊಂದು ಆಟೋರಿಕ್ಷಾವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಹೃದಯವಿದ್ರಾವಕ ದೃಶ್ಯ ನಡುರಸ್ತೆಯಲ್ಲಿ ಮೂಡಿತ್ತು.
ಆಟೋರಿಕ್ಷಾ ಚಲಾಯಿಸುತ್ತಿದ್ದ ಬನ್ನೂರಿನ ಹನೀಫ್ ತನ್ನ ಕುಟುಂಬ ಸದಸ್ಯರನ್ನು ಕರೆದೊಯ್ಯುತ್ತಿದ್ದರು.

ಕಾರು ಮತ್ತು ಆಟೋಗಳ ಮುಖಾಮುಖಿ ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಅನ್ನು ಓವರ್‌ಟೇಕ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಆಟೋಗೆ ಕಾರು ಚಾಲಕ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಆಟೋ ಚಾಲಕ ಹನೀಫ್ ಬನ್ನೂರು ಅವರ ನಾಲ್ಕೂವರೆ ವರ್ಷದ ಮಗಳು ಶಜ್ವಾ ಫಾತಿಮಾ ಮೊನ್ನೆಯೇ ದುರ್ಮರಣಕ್ಕೀಡಾಗಿದ್ದಾಳೆ. ಮಗುವಿನ ಅಜ್ಜಿ ನಿನ್ನೆ ಮೃತಪಟ್ಟಿದ್ದಾರೆ.





















































 
 

ಹನೀಫ್ ಅವರ ಪತ್ನಿ, ಅತ್ತೆ ಮತ್ತು ಇಬ್ಬರು ಮಕ್ಕಳಿಗೆ ಗಂಭೀರವಾಗಿ ಗಾಯವಾಗಿತ್ತು. ಈ ಪೈಕಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅತ್ತೆ ಪುತ್ತೂರು ಬೊಳುವಾರು ಕಾಪಿಕಾಡ್ ನಿವಾಸಿ ಝುಲೈಕಾ ಅವರಿಗೆ ನೀಡಿದ ಚಿಕಿತ್ಸೆ ಫಲ ನೀಡದೆ ಅವರು ಕೊನೆಯುಸಿರೆಳೆದಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹೃದಯೋತ್ಸವ ಪ್ರದರ್ಶಿಸಿದ ಚಂದ್ರಪ್ರಭಾ ಗೌಡ

ಶ್ರೀಮತಿ ಚಂದ್ರಪ್ರಭಾ ಗೌಡ ನೀರ್ಪಾಡಿ

ಅಪಘಾತದ ಸುದ್ದಿ ತಿಳಿದು ಸ್ವಯಂಪ್ರೇರಿತರಾಗಿ ಮೆಡ್’ಲ್ಯಾಂಡ್ ಆಸ್ಪತ್ರೆಗೆ ಧಾವಿಸಿ ರೋಗಿಗಳು ಆಸ್ಪತ್ರೆಗೆ ತಲುಪುವ ಮುನ್ನವೇ ಅಲ್ಲಿ ಹಾಜರಾಗಿ ಸಕಲ ವ್ಯವಸ್ಥೆಗಳು ಸಿದ್ಧಗೊಳ್ಳುವುದನ್ನು ಖಾತ್ರಿಪಡಿಸಿಕೊಂಡವರು ಪುತ್ತೂರು ಬ್ಲಾಕ್ ಕಾಂಗ್ರೆಸ್’ನ ಕಾರ್ಯಾಧ್ಯಕ್ಷೆ ಶ್ರೀಮತಿ ಚಂದ್ರಪ್ರಭಾ ಗೌಡ ನೀರ್ಪಾಡಿ.

ಗಾಯಾಳುಗಳ ಆಗಮನವಾದ ಬಳಿಕ ತಡರಾತ್ರಿ 10.30ರವರೆಗೂ ಆಸ್ಪತ್ರೆಯಲ್ಲೇ ಇದ್ದು ಗಾಯಾಳುಗಳಿಗೆ ನೈತಿಕ ಧೈರ್ಯ ತುಂಬಿದ ಚಂದ್ರಪ್ರಭಾ ಅವರಿಗೆ ಪ್ರಶಂಸೆಗಳು ಹರಿದು ಬರುತ್ತಿವೆ.

error: Content is protected !!
Scroll to Top