ಸೂಪರ್‌ ಮಾರ್ಕೆಟ್‌ನಲ್ಲಿ ಭೀಕರ ಸ್ಫೋಟ : 23 ಮಂದಿ ಸಾವು

ಸ್ಫೋಟದ ವೇಳೆ ಬಿಡುಗಡೆಯಾದ ವಿಷಾನಿಲದಿಂದಲೂ ಹಲವರು ಮೃತ

ಮೆಕ್ಸಿಕೋ ಸಿಟಿ: ಉತ್ತರ ಮೆಕ್ಸಿಕೋದ ಸೂಪರ್‌ ಮಾರ್ಕೆಟ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿ ಮಕ್ಕಳು ಸೇರಿದಂತೆ 23 ಮಂದಿ ಸಾವನ್ನಪ್ಪಿದ್ದಾರೆ. ಹರ್ಮೊಸಿಲ್ಲೊದ ವಾಲ್ಡೋ ಡಿಪಾರ್ಟ್‌ಮೆಂಟಲ್‌ ಸ್ಟೋರ್‌ನಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ 11 ಮಂದಿ ಗಾಯಗೊಂಡಿದ್ದು, ಅವರನ್ನು ನಗರದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಸ್ಫೋಟದ ವೇಳೆ ಬಿಡುಗಡೆಯಾದ ವಿಷಕಾರಿ ಅನಿಲ ಉಸಿರಾಟದಿಂದ ಹೆಚ್ಚಿನ ಮಂದಿ ಸಾವಿಗೀಡಾಗಿದ್ದಾರೆ ಎಂದು ವಿಧಿವಿಜ್ಞಾನ ವೈದ್ಯಕೀಯ ಸೇವೆಯ ರಾಜ್ಯದ ಅಟಾರ್ನಿ ಜನರಲ್‌ ಗುಸ್ತಾವೋ ಸಲಾಸ್‌ ಮಾಹಿತಿ ನೀಡಿದ್ದಾರೆ. ಸ್ಫೋಟದಿಂದಾಗಿ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮ ಕೆಲವರು ಜೀವಂತ ದಹನವಾಗಿದ್ದಾರೆ. ಮೃತರಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ. ಅನೇಕ ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





















































 
 

ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಮೃತರ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳು ಮತ್ತು ಗಾಯಾಳುಗಳಿಗೆ ಸಹಾಯ ಮಾಡಲು ಬೆಂಬಲ ತಂಡವನ್ನು ಕಳುಹಿಸಲು ನಾನು ಆಂತರಿಕ ಕಾರ್ಯದರ್ಶಿ ರೋಸಾ ಐಸ್ಲಾ ರೊಡ್ರಿಗಸ್ ಅವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

error: Content is protected !!
Scroll to Top