ತನಿಖೆ ನಡೆಸಿ ಕಳಂಕ ಮುಕ್ತರಾಗಲಿ ಎಂದು ಸಲಹೆ
ಬೆಂಗಳೂರು: ಸ್ಪೀಕರ್ ಯು.ಟಿ ಖಾದರ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಲಿ ಎಂದು ಮಾಜಿ ಸ್ಪೀಕರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದ್ದಾರೆ. ಯು.ಟಿ ಖಾದರ್ ಆಡಳಿತ ಸುಧಾರಣೆ ಭಾಗವಾಗಿ ಭ್ರಷ್ಟಾಚಾರದ ಪ್ರಕರಣ ಆಗಿದೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ. ಹೀಗಾಗಿ ನ್ಯಾಯಾಂಗ ತನಿಖೆಗೆ ವಹಿಸುವಂತೆ ನಾನು ಒತ್ತಾಯ ಮಾಡಿದ್ದೇನೆ. ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿ ಎಂದಿದ್ದಾರೆ.
ಸ್ಪೀಕರ್ ಸ್ಥಾನ ಸಂವಿಧಾನ ಬದ್ಧವಾಗಿ ಗೌರವದ ಪೀಠವಾಗಿದ್ದು, ಅದರ ಘನತೆ, ಗೌರವಕ್ಕೆ ಚ್ಯುತಿ ಆಗುತ್ತಿದೆ. ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಲಿ. ತನಿಖೆ ಆಧಾರದಲ್ಲಿ ಯು.ಟಿ ಖಾದರ್ ಎಲ್ಲ ಆರೋಪದಿಂದ ಮುಕ್ತರಾಗಲಿ ಎಂದು ಆಶಿಸುತ್ತೇನೆ. ನ್ಯಾಯಾಧೀಶಋಿಂದ ತನಿಖೆ ಆದಾಗ ನ್ಯಾಯಾಧೀಶರು ಅಪೇಕ್ಷೆಪಟ್ಟರೆ ದಾಖಲೆಗಳನ್ನು ಕೊಡಲು ಬಗ್ಗೆ ನಾವು ತಯಾರಿದ್ದೇವೆ ಎಂದು ಹೇಳಿದ್ದಾರೆ.
























