ರೇವ್‌ ಪಾರ್ಟಿಗೆ ಪೊಲೀಸ್‌ ದಾಳಿ : 35 ಯುವತಿಯರ ಸಹಿತ 115 ಮಂದಿ ವಶ

ಖಾಸಗಿ ರೆಸಾರ್ಟ್‌ನಲ್ಲಿ ತಡರಾತ್ರಿ ತನಕ ನಡೆದ ಪಾರ್ಟಿ

ಬೆಂಗಳೂರು : ರಾಮನಗರ ನಗರದ ಹೊರವಲಯದ ಅಯಾನಾ ಎಂಬ ಖಾಸಗಿ ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಬೆಂಗಳೂರಿನ ದಕ್ಷಿಣ ಎಸ್‌ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 115 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ದೇವಿಗೆರೆ ಕ್ರಾಸ್ ಸಮೀಪದಲ್ಲಿರುವ ಅಯಾನಾ ಖಾಸಗಿ ರೆಸಾರ್ಟ್‌ನಲ್ಲಿ ರಾತ್ರಿ ವೇಳೆ ರೇವ್ ಪಾರ್ಟಿ ನಡೆಯುತ್ತಿದೆ ಎನ್ನುವ ಮಾಹಿತಿ ಮೇರೆಗೆ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ, 35 ಯುವತಿಯರು ಸೇರಿದಂತೆ ಒಟ್ಟು 115 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಎಲ್ಲರನ್ನೂ ಬಂಧಿಸಿ ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ದಾಳಿ ವೇಳೆ ಮಾಧ್ಯಮ ಮತ್ತು ಇತರರು ವಿಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದಾಗ ಪೊಲೀಸರು ಚಿತ್ರೀಕರಣ ತಡೆದಿದ್ದಾರೆ.





















































 
 

ತಡರಾತ್ರಿ ಅಬ್ಬರದ ಮ್ಯೂಸಿಕ್‌ ಹಾಕಿಕೊಂಡು ಯುವಕ-ಯುವತಿಯರು ಪಾರ್ಟಿ ಮಾಡುತ್ತಿದ್ದರು. ಪಾರ್ಟಿಯಲ್ಲಿ ಮದ್ಯ ಯಥೇಚ್ಚವಾಗಿ ಸರಬರಾಜು ಆಗುತ್ತಿತ್ತು. ಮಾದಕ ವಸ್ತು ಪೂರೈಸಿದ ಅನುಮಾನವಿದ್ದು, ವೈದ್ಯಕೀಯ ಪರೀಕ್ಷೆ ಬಳಿಕ ಇದು ದೃಢಪಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾರ್ಟಿ ಮಾಡಲು ಸಂಬಂಧಿಸಿದ ಇಲಾಖೆಗಳಿಂದ ಸೂಕ್ತ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ. ಪೊಲೀಸರ ತನಿಖೆ ಮುಂದುವರಿದಿದೆ.

error: Content is protected !!
Scroll to Top