ಪುತ್ತೂರು: ಇಲ್ಲಿನ ಬನ್ನೂರಿನಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಪರಿಣಾಮಕಾರಿಯಾದ ರೀತಿಯಲ್ಲಿ 70ನೇ ಕನ್ನಡ ರಾಜ್ಯೋತ್ಸವ ಆಚರಿಸಲ್ಪಟ್ಟಿತು.

2025ನೇ ಸಾಲಿನ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಆಗಿರುವ ಮುಖ್ಯ ಅತಿಥಿ ಸುಭಾಷ್ ರೈ ಬೆಳ್ಳಿಪ್ಪಾಡಿ ಮಾತನಾಡಿ ಕನ್ನಡವನ್ನು ಮಾತನಾಡುವ ಮೂಲಕ ಅದನ್ನು ಉಳಿಸಬೇಕು ಎಂದು ಕರೆಯಿತ್ತರು.
ಶಾಲಾ ನಿರ್ದೇಶಕ ಸೀತಾರಾಮ ಕೇವಳ ಮಾತನಾಡಿ 1956ರಲ್ಲಿ ವಿ.ಡಿ. ಮಹಾಜನ್ ವರದಿ ಜಾರಿಗೆ ಬಂದು ಭಾಷಾವಾರು ಪ್ರಾಂತ್ಯ ರೂಪುಗೊಂಡರೂ ಇಂದಿಗೂ ನಮ್ಮಲ್ಲಿ ಅನೇಕರು ಕನ್ನಡ ಭಾಷೆಯನ್ನು ಮಾತನಾಡಲು ಹಿಂಜರಿಯುವುದು ಖೇದಕರ ಎಂದರು.

ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ಮಾತನಾಡಿ ಕನ್ನಡ ನಮ್ಮ ರಾಜ್ಯ ಭಾಷೆ ಮತ್ತು ಆಡಳಿತ ಭಾಷೆ ಅನ್ನುವುದನ್ನು ಮರೆಯಬಾರದು ಎಂದರು.
ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸೌಮ್ಯಾಶ್ರೀ ಹೆಗ್ಡೆ ಅವರು ಮಾತನಾಡಿದ ನಮ್ಮ ಕನ್ನಡ ಭಾಷಾ ವರ್ಣಮಾಲೆ ಅತಿ ಸುಂದರ ಮತ್ತು ವೈಜ್ಞಾನಿಕವಾಗಿದೆ. ಆದ್ದರಿಂದ ನಮ್ಮ ಕನ್ನಡ ಭಾಷೆ ಶ್ರೇಷ್ಠ ಎಂದರು.
ಸಭಾಧ್ಯಕ್ಷರ ಪೀಠದಿಂದ ಮಾತನಾಡಿದ ಶಾಲಾಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರು ಕನ್ನಡ ಭಾಷೆಯ ಇತಿಹಾಸ ತಿಳಿದುಕೊಂಡು ಅದರ ಮತ್ತ್ವವನ್ನು ಮನನ ಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ರಸಪ್ರಶ್ನೆ
ಕಾರ್ಯಕ್ರಮದ ಮಧ್ಯೆ ಮಧ್ಯೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆಗಳನ್ನು ಕೇಳಿ ಬಹುಮಾನ ವಿತರಿಸಲಾಯಿತು.
ಶಿಕ್ಷಕಿಯರಾದ ಯಶುಭಾ ರೈ ಕನ್ನಡ ಭಾಷಣ ನೀಡಿ ರಾಧಾ ಕನ್ನಡ ಹಾಡು ಹಾಡಿದರು .
ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿಜೇತರ ಪಟ್ಟಿಯನ್ನು ಶಿಕ್ಷಕಿ ರೀಮಾ ಲೋಬೋ ವಾಚಿಸಿದರು. ಶಿಕ್ಷಕಿ ಪ್ರಕ್ಷುತಾ ಅತಿಥಿಯವರನ್ನು ಪರಿಚಯ ಮಾಡಿದರು
ವಿದ್ಯಾರ್ಥಿಗಳ ಭಾಷಣ
6ನೇ ತರಗತಿಯ, ಅದ್ವಿಕ್ ಬಂಜನ್, 5ನೇ ತರಗತಿಯ ಗನ್ವಿತ್ ಮತ್ತು 6ನೇ ತರಗತಿಯ ಚವನ್ ಕನ್ನಡ ಭಾಷಣಗಳನ್ನು ನೀಡಿದರು.
ವಿಶೇಷ ಹಾಡು
ಮೈಸೂರಿನ ಸರಕಾರಿ ಸಹಾಯಕ ಅಭಿಯೋಜಕರಾದ ಜನಾರ್ದನ ಬೆಟ್ಟಂಪಾಡಿ ಅವರು ಸುಶ್ರಾವ್ಯವಾದ ‘ಜೋಗದ ಸಿರಿ’ ಹಾಡನ್ನು ಪ್ರಸ್ತುತಪಡಿಸಿದರು. ಬಳಿಕ ಅವರಿಗೆ ಕನ್ನಡ ಶಾಲು ಅರ್ಪಿಸಿ ಗೌರವಿಸಲಾಯಿತು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನೋಟರಿ ನ್ಯಾಯವಾದಿ ಭಾಸ್ಕರ ಕೋಡಿಂಬಾಳ, ರೋಟರಿ ಪೂರ್ವಾಧ್ಯಕ್ಷ ಸುಂದರ ರೈ ಬೊಳ್ಕಾಡಿ ಮತ್ತು ಅನೇಕ ಪೋಷಕರು ಉಪಸ್ಥಿತರಿದ್ದರು.
ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮತ್ತು ಕನ್ನಡ ಗೀತೆ ಗಾಯನ, ಶ್ರೀಮತಿ ಸುಚಿತಾ ಅವರಿಂದ ಸ್ವಾಗತ ಮತ್ತು ಶ್ರೀಮತಿ ಸವಿತಾಕುಮಾರಿ ಅವರಿಂದ ವಂದನಾರ್ಪಣೆಗಳು ನಡೆದವು. ವೇದಿಕೆಯಲ್ಲಿ ಶಾಲಾ ಸಂಚಾಲಕ ಎ. ವಿ . ನಾರಾಯಣ, ಉಪಾಧ್ಯಕ್ಷ ಉಮೇಶ್ ಮಳುವೇಲು ಮತ್ತು ಪ್ರಾಂಶುಪಾಲ ಅಮರನಾಥ್ ಪಟ್ಟೆ ಉಪಸ್ಥಿತರಿದ್ದರು. ಶಾಲಾ ನಿರ್ದೇಶಕಿ ವನಿತಾ ಎ.ವಿ. ಹಾಜರಿದ್ದರು. ಶಿಕ್ಷಕಿಯರಾದ ಹಿತಶ್ರೀ ಮತ್ತು ರಂಜಿತಾ ಕಾರ್ಯಕ್ರಮ ನಿರೂಪಿಸಿದರು.
























