ಮೆಟ್ರೋ ಹಳದಿ ಮಾರ್ಗದ ಮೂಲಕ ಅಂಗಾಂಗ ರವಾನೆ

ಬೆಂಗಳೂರು: ನಮ್ಮ ಮೆಟ್ರೋ ಬಳಸಿ ಶ್ವಾಸಕೋಶ ಮತ್ತು ಹೃದಯವನ್ನು ರವಾನೆ ಮಾಡಿ ಜೀವವೊಂದನ್ನು ಉಳಿಸಲು ಶ್ರಮಿಸಿದ ಮಹತ್ಕಾರ್ಯ ವೈದ್ಯಕೀಯ ಸಿಬ್ಬಂದಿಯಿಂದ ಆಗಿದೆ.

ಯಶವಂತಪುರದ ಸ್ಪರ್ಷ ಆಸ್ಪತ್ರೆಯಿಂದ ನಾರಾಯಣ ಹೆಲ್ತ್ ಸಿಟಿ ಮತ್ತು ಆಸ್ಟರ್ ಆರ್‌ವಿ ಆಸ್ಪತ್ರೆಗೆ ಅಂಗಾಂಗಗಳನ್ನು ಮೆಟ್ರೋ ಹಳದಿ ಲೈನ್ ಮೂಲಕ ಆಸ್ಪತ್ರೆಯ ಸಿಬ್ಬಂದಿಗಳು ಕೊಂಡೊಯ್ದಿದ್ದಾರೆ.

ಎರಡು ಆಸ್ಪತ್ರೆಗಳಿಗೆ ಮೂವತ್ತರಿಂದ ಮೂವತ್ತಮೂರು ಕಿ. ಮೀ. ದೂರ ಇದ್ದು ಮೆಟ್ರೋ ಬಳಸಿ 61 ನಿಮಿಷಗಳಲ್ಲಿ ಅಂಗಾಂಗ ಸಾಗಾಟ ಮಾಡಲಾಗಿದೆ. ಈ ವರೆಗೆ ಕೇವಲ ಆಂಬ್ಯುಲನ್ಸ್ ಮೂಲಕವೇ ಇಂತಹ ಕಾರ್ಯಗಳು ನಡೆಯುತ್ತಿದ್ದು, ಸಂಚಾರ ದಟ್ಟಣೆಯಿಂದ ‌ಸಮಸ್ಯೆ ಉಂಟಾಗುತ್ತಿತ್ತು. ಈ ಸಮಸ್ಯೆ ತಪ್ಪಿಸಲು ಆಸ್ಪತ್ರೆ ಸಿಬ್ಬಂದಿ ಮೆಟ್ರೋ ಬಳಸಿ ಹೃದಯ ಮತ್ತು ಶ್ವಾಸಕೋಶ ರವಾನಿಸಿದ್ದಾರೆ.





















































 
 

ಈ ಕೆಲಸದಲ್ಲಿ ಸಮನ್ವಯ ಮತ್ತು ಸಹಾಯಕ್ಕಾಗಿ ನಾರಾಯಣ ಹೆಲ್ತ್ ಕೇರ್ ಬಿಎಂ‌ಆರ್‌ಸಿಎಲ್ ಗೆ ಧನ್ಯವಾದ ತಿಳಿಸಿದೆ.

error: Content is protected !!
Scroll to Top