ಕಡಬ: ತಾಲೂಕಿನ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಹೊಸಮಠದಲ್ಲಿ ನೂತನ ಬೃಹತ್ ಒಕ್ಕಲಿಗ ಗೌಡ ಸಮುದಾಯ ಭವನ ನಿರ್ಮಾಣವಾಗುತ್ತಿರುವ ಹಿನ್ನೆಲೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ಅವರು ತಮ್ಮ 70 ನೇ ಜನ್ಮದಿನದ ಹಿನ್ನೆಲೆ 50 ಲಕ್ಷ ರೂ. ದೇಣಿಗೆ ನೀಡಿದರು.
ಅವರನ್ನು ಕಡು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪರವಾಗಿ ಹೃತ್ಪೂರ್ವಕವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು, ನಿರ್ದೇಶಕ ಆಶಾ ತಿಮ್ಮಮ್ಮ ಗೌಡ ಕುಂಡಡ್ಕ, ಪ್ರವೀಣ್ ಕುಂಟ್ಯಾನ, ಚಂದ್ರಶೇಖರ ಗೌಡ ಕೋಡಿಬೈಲು, ತಾಲೂಕು ಸಲಹಾ ಸಮಿತಿಯ ಮುಖ್ಯಸ್ಥ ಜನಾರ್ದನ ಗೌಡ ಪಣೆಮಜಲು, ಸಲಹಾ ಸಮಿತಿಯ ಸದಸ್ಯ ಡಾ.ಶಿವಕುಮಾರ್ ಹೊಸೊಳಿಕೆ, ಪ್ರಮುಖರಾದ ತಿಮ್ಮಪ್ಪ ಗೌಡ ಕುಂಡಡ್ಕ, ವ್ಯವಸ್ಥಾಪಕ ಅಶೋಕ್ ಶೇಡಿ ಮತ್ತಿತರರು ಉಪಸ್ಥಿತರಿದ್ದರು.
























