ಶರಣ್ ಪಂಪ್ವೆಲ್ ಬಂಧನ: ಪೊಲೀಸರ ಮೇಲೆ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ

ಮಂಗಳೂರು: RSS ಮುಖಂಡರೊಬ್ಬರ ಭಾಷಣದ ತುಣುಕು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ಅದನ್ನು ಹಂಚಿಕೊಂಡ ಆರೋಪದಲ್ಲಿ ‌ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶರಣ್ ಪಂಪ್ವೆಲ್ ಬಂಧನದ ಬೆನ್ನಲ್ಲೇ ಪೊಲೀಸ್ ಠಾಣೆಗೆ ಆಗಮಿಸಿದ ಶಾಸಕ ವೇದವ್ಯಾಸ ಕಾಮತ್ ಪ್ರಕರಣದ ಮಾಹಿತಿ ನೀಡಲು ತಡ ಮಾಡಿದ ಪೊಲೀಸರ ಮೇಲೆ ಗರಂ ಆದ ಘಟನೆ ನಡೆದಿದೆ.

ಪಂಪ್ವೆಲ್ ಬಂಧನ ಪ್ರಕರಣದ ಮಾಹಿತಿ ಪಡೆಯಲು ಠಾಣೆಗೆ ಬಂದಿದ್ದ ಕಾಮತ್ ಅವರಿಗೆ ಪೊಲೀಸರು ಸರಿಯಾದ ಮಾಹಿತಿ ನೀಡಿಲ್ಲ. ಅರ್ಧ ತಾಸಿಗೂ ಅಧಿಕ ಸಮಯ ಶಾಸಕರು ಠಾಣೆಯಲ್ಲೇ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಅವರು ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿದ ಘಟನೆ ನಡೆಯಿತು.





















































 
 
error: Content is protected !!
Scroll to Top