ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ರಿ ಚಂದಳಿಕೆ ವಿಟ್ಲ ಸಾರ್ವಜನಿಕ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ವಿಟ್ಲ ಇದರ ಆಶ್ರಯದಲ್ಲಿ ಸಮುದಾಯ ಕೇಂದ್ರ ವಿಟ್ಲ ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರ ಸಹಯೋಗದಲ್ಲಿ ಉಚಿತ ಬೃಹತ್ ಅರೋಗ್ಯ ಶಿಬಿರ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಆಧಾರ್ ನೋಂದಣಿ ತಿದ್ದುಪಡಿ ಕಾರ್ಯಕ್ರಮವು ಮಂಗಳ ಮಂಟಪ ಶ್ರೀ ರಾಮ ನಗರ ಚಂದಳಿಕೆ ವಿಟ್ಲದಲ್ಲಿ ಜರಗಿತು

ಕಾರ್ಯಕ್ರಮವನ್ನು ಕೃಷ್ಣಯ್ಯ ಕೆ. ವಿಟ್ಲ ಅರಮನೆ ಅವರು ಉದ್ಘಾಟನೆ ಮಾಡಿದರು. ಶಂಕರ ಭಟ್ ಬದನಾಜೆ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ ಕುಮಾರ್ ರೈ ಹಾಗೂ ರವೀಶ್ ಕೆ. (ಸ್ಥಾಯಿ ಸಮಿತಿ ಅಧ್ಯಕ್ಷರು ಪಟ್ಟಣ ಪಂಚಾಯತ್ ವಿಟ್ಲ), ಸನತ್ ಕುಮಾರ್ ಚಂದಳಿಕೆ
(ಎಸ್ ಬಿ ಐ ಸೀನಿಯರ್ ಮ್ಯಾನೇಜರ್), ಶಿವ ಕುಮಾರಿ (ಅಂಚೆ ಪಾಲಕರು ವಿಟ್ಲ), ಗುರುಪ್ರಸಾದ್ ಕೆ. ಎಸ್. (ಮಾರುಕಟ್ಟೆ ಅಧಿಕಾರಿ ಅಂಚೆ ಇಲಾಖೆ ಪುತ್ತೂರು ವಿಭಾಗ),
ಡಾ. ಶಮನ್ ಜೆ. ಶೆಟ್ಟಿ (ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ವಿಟ್ಲ), ಡಾ. ರವಿ ಶಂಕರ ಭಟ್ (ವೈದ್ಯಕೀಯ ತಜ್ಞರು ಜಸ್ಟೀಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು), ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ರಿ ಚಂದಳಿಕೆ ಮತ್ತು ಕ್ಲಬ್‌ನ ಅಧ್ಯಕ್ಷ ಕರುಣಾಕರ ಗೌಡ ಮುದೂರು,ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ರಿ ಚಂದಳಿಕೆ ಮತ್ತು ಕ್ಲಬ್ ಗೌರವಾಧ್ಯಕ್ಷ ಗಂಗಾಧರ ಸಿ., ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ರಿ ಚಂದಳಿಕೆ ಮತ್ತು ಕ್ಲಬ್ ನ ಪದಾಧಿಕಾರಿಗಳು ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

ಅರು ನೂರಕ್ಕೂ ಮಿಕ್ಕಿ ಸಾರ್ವಜನಿಕ ಬಂಧುಗಳು ಶಿಬಿರದ ಸದುಪಯೋಗ ಪಡೆದುಕೊಂಡರು. ಅಗತ್ಯ ಇದ್ದವರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು.
























