ಫ್ಲೈವುಡ್‌ ಕಾರ್ಖಾನೆಯಲ್ಲಿ ಭೀಕರ ಸ್ಫೋಟ : ಓರ್ವ ಸಾವು, ಹಲವು ಮಂದಿಗೆ ಗಂಭೀರ ಗಾಯ

ಕುಂಬಳೆಯ ಪ್ರಸಿದ್ಧ ಅನಂತಪುರ ಕ್ಷೇತ್ರದ ಸಮೀಪ ಇರುವ ಕಾರ್ಖಾನೆಯಲ್ಲಿ ದುರಂತ

ಮಂಗಳೂರು : ಪಕ್ಕದ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪ ಅನಂತಪುರದಲ್ಲಿ ನಿನ್ನೆ ರಾತ್ರಿ ಫ್ಲೈವುಡ್ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿ ಓರ್ವ ಕಾರ್ಮಿಕ ಮೃತಪಟ್ಟು 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಡೆಕೋರ್ ಪ್ಯಾನಲ್ ಇಂಡಸ್ಟ್ರೀಸ್ ಸಂಸ್ಥೆಯಲ್ಲಿ ಈ ಮಹಾದುರಂತ ಸಂಭವಿಸಿದೆ.

ಅನಂತಪುರ ಕೖಗಾರಿಕಾ ಪ್ರಾಂಗಣದ ಫ್ಲೈವುಡ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಈ ದುರಂತ ಉಂಟಾಗಿದೆ. ಸೋಮವಾರ ರಾತ್ರಿ ಸುಮಾರು ಏಳರ ವೇಳೆಗೆ ಭಾರಿ ಸ್ಫೋಟ ಸಂಭವಿಸಿದ್ದು, ಪರಿಸರದ ಮನೆ, ಕಾರ್ಖಾನೆಗಳಿಗೆ ಛಿದ್ರಗೊಂಡ ಕಲ್ಲುಗಳು ಅಪ್ಪಳಿಸಿದ್ದು, ಸ್ಫೋಟದ ಬಿರುಸಿಗೆ ಅನಂತಪುರ ಕ್ಷೇತ್ರದ ಪರಿಸರವೇ ಕಂಪಿಸಿದೆ. ಘಟನೆಯಲ್ಲಿ ಹಲವು ಕಾರ್ಮಿಕರು ಗಂಭೀರ ಗಾಯಗೊಂಡಿದ್ದು, 15ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳ ಸಹಾಯದಿಂದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಪೖಕಿ ಓರ್ವ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಂಭಾವ್ಯತೆ ಇದೆ ಎನ್ನಲಾಗಿದೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತದಲ್ಲಿ ಮೃತಪಟ್ಟ ಕಾರ್ಮಿಕನನ್ನು ಅಸ್ಸಾಂ ನಿವಾಸಿ ನಜೀರುಲ್ ಆಲಿ (20)ಎಂದು ಗುರುತಿಸಲಾಗಿದೆ.





















































 
 

ಸ್ಫೋಟದ ಭೀಕರ ಸದ್ದು ಪರಿಸರದಲ್ಲಿ ಭಯ. ಭೀತಿಯ ಆತಂಕ ಸೃಷ್ಟಿಸಿ ಹಲವರು ಮನೆಯಿಂದ ಹೊರಗೆ ಓಡಿದರೆ, ಅನೇಕ ಮನೆಗಳ ಗಾಜಿಗೆ ಹಾನಿಯಾಗಿವೆ. ಕಾರ್ಖಾನೆ ಪರಿಸರದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಾರ್ವಜನಿಕ ಯಾರನ್ನೂ ಅತ್ತ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಅಪೂರ್ವ ತಟಾಕ ಕ್ಷೇತ್ರ ಅನಂತಪುರ ದೇವಳ ಸುತ್ತಲಿನ ಪರಿಸರ ಕೖಗಾರಿಕಾ ಕೇಂದ್ರವಾಗಿದ್ದು, ಇಂಥಾ ದುರಂತ ಸಂಭವಿಸಿದರುವುದು ಇದೇ ಮೊದಲ ಬಾರಿಯಾಗಿದೆ.
ಘಟನೆಯಿಂದಾಗಿ ಪರಿಸರಕ್ಕೆ ವಾಹನ ಸಂಚಾರ ನಿಷೇಧಿಸಲಾಗಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡ ಹತ್ತಕ್ಕೂ ಅಧಿಕ ಮಂದಿ ಅನ್ಯ ರಾಜ್ಯ ಕಾರ್ಮಿಕರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಶಲಾಗಿದೆ. ಕಾರ್ಮಿಕರ ಮನೆಮಂದಿ ಸಹಿತ ಮಕ್ಕಳೂ ಗಾಯಗೊಂಡಿದ್ದು ಅವರನ್ನು ಸ್ಥಳೀಯ ವಿವಿಧ ಆಸ್ಪತ್ರೆಗೆ ಸೇರಿಸಲಾಗಿದೆ. ಸುಮಾರು ಇನ್ನೂರಕ್ಕೂ ಅಧಿಕ ಅನ್ಯರಾಜ್ಯದ ಕಾರ್ಮಿಕರುೀ ಕಾರ್ಖಾನೆಯಲ್ಲಿ ದುಡಿಯುತ್ತಿದ್ದಾರೆ. ಇದರ ಪಕ್ಕದಲ್ಲೇ ಕಾರ್ಮಿಕರ ವಸತಿ ವ್ಯವಸ್ಥೆ ಒದಗಿಸಲಾಗಿದ್ದು ಇದು ಗಾಯಾಳುಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಸ್ಫೋಟದ ತೀವ್ರತೆಗೆ ದೂರದ ಪೇರಾಲ್ ಕಣ್ಣೂರು, ಮೊಗ್ರಾಲ್, ಮಾಯಿಪ್ಪಾಡಿ, ಎಡನಾಡು, ಕಟ್ಟತ್ತಡ್ಕ, ಮುಗು, ಕನ್ಯಪ್ಪಾಡಿ, ಮಾನ್ಯ ಪರಿಸರಗಳು ಕಂಪಿಸಿದ ಬಗ್ಗೆ ನಾಗರಿಕರು ತಿಳಿಸಿದ್ದಾರೆ. ಭೂಮಿಯ ಕಂಪನದೊಂದಿಗೆ ಹಲವು ಮನೆಯ ಕಿಟಿಕಿ ಗಾಜುಗಳು ಒಡೆದು ಸಿಡಿದಿವೆ. ಇದೇ ವೇಳೆ ಅನಂತಪುರ ಕ್ಷೇತ್ರ ಸಹಿತ ಪರಿಸರದ ಯಾವೊಂದು ಮನೆಗೂ ಯಾವುದೇ ಕಂಪನವಾಗಲಿ, ಭೀಕರ ಶಬ್ದವಾಗಲಿ ಕೇಳಿಲ್ಲ. ಇದು ದೇವ ಭೂಮಿಯನ್ನು ದೇವರೇ ಕಾಪಾಡಿದ ಮಹಾ ವಿದ್ಯಮಾನ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಕಾರ್ಖಾನೆ ಎತ್ತರದಲ್ಲಿದ್ದು, ಅನಂತಪುರ ಕ್ಷೇತ್ರ ಪರಿಸರ ತಗ್ಗು ನೆಲದಲ್ಲಿರುವುದರಿಂದ ಕ್ಷೇತ್ರ ಸಹಿತ ಪರಿಸರಕ್ಕೆ ಯಾವುದೇ ಹಾನಿಯಾಗಿಲ್ಲ.

error: Content is protected !!
Scroll to Top