ಧರ್ಮಸ್ಥಳ ಪ್ರಕರಣ : ತಿಮರೋಡಿ ಟೀಮ್‌ಗೆ ಡೆಡ್‌ಲೈನ್‌ ವಿಧಿಸಿದ ಎಸ್‌ಐಟಿ

ವಿಚಾರಣೆಗೆ ಹಾಜರಾಗಲು ಮತ್ತೆ 7 ದಿನಗಳ ಕಾಲಾವಕಾಶ

ಧರ್ಮಸ್ಥಳ: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನಿನ್ನೆ ಮಹೇಶ್‌ ತಿಮರೋಡಿ ಮತ್ತು ಟೀಮ್‌ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದೆ. ಮಹೇಶ್‌ ಶೆಟ್ಟಿ ತಿಮರೋಡಿ ತನ್ನ ವಕೀಲರನ್ನು ಕಳುಹಿಸಿ ಕಾಲಾವಕಾಶ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಮಹೇಶ್ ಶೆಟ್ಟಿ ತಿಮರೋಡಿಗೆ ಏಳು ದಿನ ಹಾಗೂ ಇನ್ನುಳಿದ ಮೂವರಿಗೆ ನಾಲ್ಕು ದಿನದ ಒಳಗೆ ವಿಚಾರಣೆಗೆ ಹಾಜರಾಗಲು ಡೆಡ್‌ಲೈನ್‌ ವಿಧಿಸಿ ಕಾಲಾವಕಾಶ ನೀಡಿದೆ. ರಾಜ್ಯಾದ್ಯಂತ ಸದ್ದು ಮಾಡಿದ್ದ ಬುರುಡೆ ಪ್ರಕರಣ ತನಿಖೆ ಅಂತಿಮ ಘಟ್ಟದಲ್ಲಿದ್ದು, ಸೋಮವಾರದ ವಿಚಾರಣೆ ನಿರ್ಣಾಯಕವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಸುಜಾತ ಭಟ್‌ ಹೊರತುಪಡಿಸಿ ಇನ್ನುಳಿದವರು ವಿಚಾರಣೆಗೆ ಹಾಜರಾಗದಿರುವುದರಿಂದ ಇನ್ನೂ ಏಳು ದಿನ ಕುತೂಹಲ ಮುಂದುವರಿದಿದೆ.

ಈ ನಡುವೆ ನಿನ್ನೆ ಸೌಜನ್ಯಾ ಪರ ಹೋರಾಟಗಾರರು ಎಂದು ಹೇಳಿಕೊಳ್ಳುತ್ತಿರುವವರು ಸೋಮವಾರ ಬೆಳ್ತಂಗಡಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲು ಬಂದಾಗ ಹೈಡ್ರಾಮಾ ಸೃಷ್ಟಿಯಾಯಿತು. ಪೊಲೀಸರು ತಡೆದಾಗ ಹೋರಾಟಗಾರರು ಪ್ರತಿಭಟಿಸಿದ್ದು, ಈ ಸಂದರ್ಭ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಹೋರಾಟಗಾರರು ಧರಣಿ ಕುಳಿತಿದ್ದು, ಕೊನೆಗೆ ಐದು ಮಂದಿಗೆ ಒಳಗೆ ಹೋಗಿ ಮನವಿ ಸಲ್ಲಿಸಲು ಅವಕಾಶ ನೀಡಲಾಯಿತು.





















































 
 

ಸೋಮವಾರ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್, ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ ಹಾಗೂ ಸುಜಾತ್ ಭಟ್‌ಗೆ ಬಿಎನ್‌ಎಸ್‌ 35(3) ಅಡಿಯಲ್ಲಿ ಎಸ್‌ಐಟಿ ನೋಟಿಸ್ ಜಾರಿ ಮಾಡಿತ್ತು. ತನಿಖೆಯಲ್ಲಿ ಕಂಡುಕೊಂಡಂತೆ ಪ್ರಕರಣದ ಕುರಿತು ಹಲವು ಸಂಗತಿಗಳನ್ನು ಮತ್ತು ಸಂದರ್ಭಗಳನ್ನು ತಮ್ಮಿಂದ ಖಚಿತಪಡಿಸಿಕೊಳ್ಳಲು ನಿಮ್ಮನ್ನು ವಿಚಾರಿಸುವುದು ಅಗತ್ಯವಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದರು. ಜೊತೆಗೆ ವಿಚಾರಣೆಗೆ ಹಾಜರಾಗದಿದ್ದರೆ ಬಂಧನ ಮಾಡುವ ಎಚ್ಚರಿಕೆಯನ್ನೂ ನೀಡಿದ್ದರು.

ವಿಚಾರಣೆ ಸಂಬಂಧ ಬೆಳ್ಳಂಬೆಳಗ್ಗೆ ಸುಜಾತ್ ಭಟ್ ಬೆಂಗಳೂರಿನಿಂದ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿದ್ದರು. ಬುರುಡೆ ಗ್ಯಾಂಗ್ ಗೈರಾಗಿರುವುದನ್ನು ಕಂಡು ಎಸ್‌ಐಟಿ ಮಧ್ಯಾಹ್ನ 2 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಡೆಡ್‌ಲೈನ್ ನೀಡಿದ್ದರು. ಅದಕ್ಕೂ ಬಗ್ಗದ ಗ್ಯಾಂಗ್ ಕೊನೆಗೆ ವಿಚಾರಣೆಗೆ ಹಾಜರಾಗದೇ ತಮ್ಮ ವಕೀಲರನ್ನು ಕಳುಹಿಸಿದ್ದರು. ತಿಮರೋಡಿ ಪರ ವಕೀಲರಾದ ಅಂಬಿಕಾ ಪ್ರಭು ಹಾಗೂ ತಂಡ ಆಗಮಿಸಿ, ಮಹೇಶ್ ಶೆಟ್ಟಿ ತಿಮರೋಡಿ ಇಂದು ವಿಚಾರಣೆಗೆ ಬರಲು ಆಗಲ್ಲ, ಹೀಗಾಗಿ ನಾಲ್ವರಿಗೂ ಏಳು ದಿನ ಸಮಯ ಕೊಡಿ ಎಂದು ಎಸ್‌ಐಟಿ ಬಳಿ ಕೇಳಿಕೊಂಡಿದ್ದರು. ಅದರಂತೆ ಎಸ್‌ಐಟಿ ಅಧಿಕಾರಿಗಳು ಕಾಲಾವಕಾಶ ನೀಡಿದ್ದಾರೆ.

error: Content is protected !!
Scroll to Top