ಸಮಾಜ ಕಲ್ಯಾಣ ಇಲಾಖೆಯಲ್ಲಿ 125 ಕೋ. ರೂ. ಅವ್ಯವಹಾರ ಆರೋಪ

ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ಸರ್ಕಾರದ ಮತ್ತೊಂದು ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಸಮಾಜ ಕಲ್ಯಾಣ ಇಲಾಖೆಯ ಟೆಂಡರ್‌ನಲ್ಲಿ ಭಾರಿ ಪ್ರಮಾಣದ ಗೋಲ್‌ಮಾಲ್ ನಡೆಯುತ್ತಿದೆ ಎಂದು ಇಲಾಖೆಯ ಸಚಿವ ಎಚ್‌.ಸಿ.ಮಹಾದೇವಪ್ಪ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಟೆಂಡರ್‌ನಲ್ಲಿ 125 ಕೋ.ರೂ. ಮೊತ್ತದ ಗೋಲ್ಮಾಲ್ ಆಗಿದೆ ಎನ್ನಲಾಗಿದೆ. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗ ಸ್ಫರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರ ಬಿಡ್‌ನಲ್ಲಿ ಭ್ರಷ್ಟಾಚಾರ ನಡೆದಿದೆ. ಅನರ್ಹ ಬಿಡ್‌ದಾರರಿಗೆ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಸಚಿವರ ವಿರುದ್ಧವೂ ಲೋಕಾಯಕ್ತಕ್ಕೆ ದೂರು ನೀಡಿ ತನಿಖೆಗೆ ಮನವಿ ಮಾಡಲಾಗಿದೆ. ಸಿಎಂ ಕಚೇರಿಗೂ ದೂರು ಕೊಡಲಾಗಿದೆ.





















































 
 

ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ 125 ಕೋಟಿ ಹಣ ಟೆಂಡರ್‌ನಲ್ಲಿ ಗೋಲ್ಮಾಲ್, ಪರಿಶಿಷ್ಟ ಜಾತಿ, ಪಂಗಡಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಐಎಎಸ್, ಕೆಎಎಸ್, ಎಫ್‌ಡಿಎ ಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದರಲ್ಲಿ ಹಗರಣ, 30 ಕೋಟಿ ಅಧಿಕ ಮೊತ್ತದ ಟೆಂಡರನ್ನು ಅನುಭವವಿಲ್ಲದ, ಟೆಂಡರ್ ನಿಯಮಗಳಿಗೆ ಒಳಪಡದ ಸಂಸ್ಥೆಗಳಿಗೆ ನೀಡಲಾಗಿದೆ, ನರ್ಹ ಬಿಡ್‌ದಾರ ತರಬೇತಿ ಸಂಸ್ಥೆಗಳಿಗೆ ಚೆಕ್ ಮೂಲಕ ಹಣ ಪಾವತಿ, ಹಲವು ಅಕ್ರಮಗಳಲ್ಲಿ ಅಧಿಕಾರಿಗಳು ಭಾಗಿ ಎಂಬಿತ್ಯಾದಿ ಆರೋಪಗಳನ್ನು ಮಾಡಲಾಗಿದೆ.

error: Content is protected !!
Scroll to Top