ಕೊಟ್ಟ ಸಾಲ ಮರಳಿ ಕೊಡದಕ್ಕೆ ಗೆಳೆಯನ ಹತ್ಯೆ

ಬೆಳಗಾವಿ: ಕೊಟ್ಟ ಎರಡು ಸಾವಿರ ರೂ. ಸಾಲ ತಿರುಗಿಸಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಕೊಡಲಿಯಿಂದ ಕಡಿದು ಕೊಲೆ ಮಾಡಿ, ಆರೋಪಿ ಪೊಲೀಸರಿಗೆ ಶರಣಾದ ಘಟನೆ ಬೈಲಹೊಂಗಲದ ಗಿರಿಯಾಲ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ ಗೌಡರ್ ‌ಎಂಬವನೇ ಮೃತ ದುರ್ದೈವಿ. ಆರೋಪಿ ದಯಾನಂದ ಗುಂಡ್ಲೂರ ಎಂಬಾತನಿಂದ ಕಳೆದ ವಾರವಷ್ಟೇ ಮಂಜುನಾಥ ಹಣ ಸಾಲ ಪಡೆದು, ಒಂದು ವಾರದಲ್ಲಿ ಹಿಂದಿರುಗಿಸುವುದಾಗಿ ತಿಳಿಸಿದ್ದ. ಅವಧಿ ಮುಗಿದಾಗ ದಯಾನಂದ ಹಣ ವಾಪಸ್ಸು ಕೇಳಿದ್ದಾನೆ. ಆಗ ಇಬ್ಬರಿಗೂ ಜಗಳವಾಗಿದೆ. ಜಗಳ ಮಂಜುನಾಥನ ಕೊಲೆಯಲ್ಲಿ ಅಂತ್ಯವಾಗಿದೆ.

ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಕೊಂಡು ಹೋಗುವ ಮುನ್ನವೇ ಮಂಜುನಾಥ್ ಸಾವನ್ನಪ್ಪಿದ್ದಾನೆ. ಆರೋಪಿ ದಯಾನಂದ ಸ್ವಯಂಪ್ರೇರಿತನಾಗಿ ಪೊಲೀಸರಿಗೆ ಶರಣಾಗಿದ್ದಾನೆ.





















































 
 
error: Content is protected !!
Scroll to Top