ಪುತ್ತೂರು: ಕಳೆದ ಒಂದೂವರೆ ವರ್ಷದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ 8 ನೇ ತರಗತಿಯ ವಿದ್ಯಾರ್ಥಿಯು ಅನೇಕ ವೈದ್ಯರ ಚಿಕಿತ್ಸೆಯ ನಂತರವೂ ಚೇತರಿಸಿಕೊಳ್ಳದೇ ಅವನ ವಿದ್ಯಾಭ್ಯಾಸವನ್ನೇ ಅರ್ಧದಲ್ಲಿ ನಿಲ್ಲಿಸುವ ಪರಿಸ್ಥಿತಿಯಲ್ಲಿ ಪೋಷಕರೂ ಕಂಗಾಲಾಗಿದ್ದರು. ಈ ವಿಚಾರವನ್ನು ಅರಿತ ಕತ್ರಿಬೈಲ್ ಡಾ.ಶ್ರೀಕುಮಾರ್ ಅವರು ಮತ್ತು ಮಂಗಳೂರಿನ ಸರ್ಜನ್ ಡಾ.ರಾಜೇಶ್ ಬಲ್ಲಾಳ್ ಈ ಖಾಯಿಲೆಯನ್ನು ಸವಾಲಾಗಿ ಸ್ವೀಕರಿಸಿ ಕೇವಲ 15 ದಿನದಲ್ಲಿ ವಿದ್ಯಾರ್ಥಿಯ ಹೊಟ್ಟೆನೋವು ಸಂಪೂರ್ಣವಾಗಿ ಗುಣವಾಗಿ ಆ ಪ್ರತಿಭಾವಂತ ವಿದ್ಯಾರ್ಥಿಯ ಬದುಕಿಗೆ ಬಾಳ ಬೆಳಕಾಗಿದ್ದಾರೆ.
ಇಬ್ಬರು ವೈದ್ಯರ ಈ ಸೇವೆಯನ್ನು ಮನಗಂಡು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕಾವು ಘಟಕದ ವತಿಯಿಂದ ಡಾ.ಶ್ರೀಕುಮಾರ್ ಅವರ ಮನೆಗೆ ತೆರಳಿ ಶಾಲು ಹಾಕಿ ಫಲವಸ್ತುಗಳೊಂದಿಗೆ ಅಭಿನಂದಿಸಿ ಸಮಾಜಕ್ಕೆ ನಿರಂತರ ಅವರ ವೈದ್ಯಕೀಯ ಸೇವೆ ಸಿಗುತ್ತಿರಲಿ ಮತ್ತು ಆ ವಿದ್ಯಾರ್ಥಿಯ ಭವಿಷ್ಯವು ಉತ್ತಮವಾಗಿ ರೂಪುಗೊಳ್ಳಲಿ ಎಂದು ಶುಭಹಾರೈಸಲಾಯಿತು.
ಈ ಸಂಧರ್ಭದಲ್ಲಿ ಪುತ್ತಿಲ ಪರಿವಾರ ಕಾವು ಘಟಕದ ಅಧ್ಯಕ್ಷ ಹರೀಶ್ ಕುಂಜತ್ತಾಯ ,ಪದಾಧಿಕಾರಿಗಳಾದ ಯೋಗೀಶ್ ಕಾವು, ರವಿಪ್ರಸಾದ್ ರೈ ಕಾವು, ಸುದೀಂದ್ರ ಕಾವು, ಅಮೃತಲಿಂಗಂ ಕಾವು, ನಿರಂಜನ್ ರಾವ್ ಕಾವು ಮತ್ತು ಚಿದಾನಂದ ಆಚಾರ್ಯ ಕಾವು ಉಪಸ್ಥಿತಿಯಿದ್ದರು.
























