ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಡಿ.ಕೆ. ಶಿವಕುಮಾರ್ ಭರವಸೆ

ಬೆಂಗಳೂರು: ಕಬ್ಬನ್ ಪಾರ್ಕ್ ಪುನಶ್ಚೇತನ ಕಾರ್ಯಕ್ಕೆ ಡಿ ಸಿ ಎಂ ಡಿ.ಕೆ. ಶಿವಕುಮಾರ್ 5 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ.

ಬೆಂಗಳೂರಿನ ಶ್ವಾಸ ಕೋಶಗಳು ಎಂದು ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಅನ್ನು ಬಣ್ಣಿಸಿರುವ ಅವರು, ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ನೀಡುವುದಾಗಿ ವಾಗ್ದಾನ ನೀಡಿರುವುದಾಗಿದೆ.

ಕಬ್ಬನ್ ಪಾರ್ಕ್ ಆಸುಪಾಸಿನಲ್ಲಿ ಯಾವುದೇ ಹೊಸ ನಿರ್ಮಾಣಕ್ಕೆ ಆಸ್ಪದ ಇಲ್ಲ. ಕಬ್ಬನ್ ಪಾರ್ಕ್ ಬಗ್ಗೆ ಜನರು ಸಹ ಕಾಳಜಿ ವಹಿಸಬೇಕು. ಈ ಸ್ಥಳದ ರಕ್ಷಣೆಗೆ ಬಿಡಿಎ ಮತ್ತು ತೋಟಗಾರಿಕಾ ಇಲಾಖೆಗೆ ಹಣ ಒದಗಿಸಲು ಸಿದ್ಧ ಎಂದಿದ್ದಾರೆ.





















































 
 

ನೈಸರ್ಗಿಕ ಮೋಡಿಗೆ ಧಕ್ಕೆ ಆಗದ ರೀತಿಯಲ್ಲಿ ಪಾರ್ಕ್ ಅಭಿವೃದ್ಧಿ ಮಾಡಲಾಗುವುದು. ಅದನ್ನು ಸಮುದಾಯ ಸ್ಥಳವಾಗಿ ಅಭಿವೃದ್ಧಿ ಮಾಡುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿಯೂ ಅವರು ಹೇಳಿದ್ದಾರೆ.

error: Content is protected !!
Scroll to Top