ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ಹಳಿ ವಿದ್ಯುದ್ದೀಕರಣ ಹಿನ್ನೆಲೆ
ಬೆಂಗಳೂರು: ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ (ಘಾಟ್ ಸೆಕ್ಷನ್) ನಡುವಿನ ರೈಲ್ವೆ ವಿದ್ಯುದ್ದೀಕರಣ ಕಾರ್ಯವು ನಡೆಯುತ್ತಿರುವ ಕಾರಣ ನೈರುತ್ಯ ರೈಲ್ವೆ ಬೆಂಗಳೂರು – ಮಂಗಳೂರು – ಕಾರವಾರದ ನಡುವೆ ಸಂಚರಿಸುವ 6 ಪ್ರಮುಖ ರೈಲುಗಳ ರದ್ದು ಅವಧಿಯನ್ನು ಮತ್ತಷ್ಟು ದಿನ ವಿಸ್ತರಣೆ ಮಾಡಿದೆ. ನೈರುತ್ಯ ರೈಲ್ವೆ ನವೆಂಬರ್ 2ರಿಂದ ಡಿಸೆಂಬರ್ 15 ರವರೆಗೆ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಲೈನ್ ಬ್ಲಾಕ್ ತೆಗೆದುಕೊಳ್ಳಲಿದೆ. ಈ ಕಾರಣದಿಂದಾಗಿ ಕೆಲವು ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರದ್ದಾದ ರೈಲುಗಳು
ರೈಲು ಸಂಖ್ಯೆ 16539 ಯಶವಂತಪುರ – ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಮೊದಲು ನವೆಂವರ್ 1ರವರೆಗೆ ರದ್ದುಗೊಂಡಿತ್ತು. ಈಗ ಡಿಸೆಂಬರ್ 13 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ – ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಮೊದಲು ನವೆಂಬರ್ 2ರವರೆಗೆ ರದ್ದುಗೊಂಡಿತ್ತು. ಈಗ ಡಿಸೆಂಬರ್ 14 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂಕ್ಷನ್ ಗೋಮಟೇಶ್ವರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ಮೊದಲು ಅಕ್ಟೋಬರ್ 30 ರವರೆಗೆ ರದ್ದುಗೊಂಡಿತ್ತು. ಈಗ ಡಿಸೆಂಬರ್ 14 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ – ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ಮೊದಲು ಅಕ್ಟೋಬರ್ 30 ರವರೆಗೆ ರದ್ದುಗೊಂಡಿತ್ತು. ಈಗ ಡಿಸೆಂಬರ್ 15 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ಮೊದಲು ಅಕ್ಟೋಬರ್ 31 ರವರೆಗೆ ರದ್ದುಗೊಂಡಿತ್ತು. ಈಗ ಡಿಸೆಂಬರ್ 15 ರವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 16516 ಕಾರವಾರ – ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ ಮೊದಲು ನವೆಂಬರ್ 1 ರವರೆಗೆ ರದ್ದುಗೊಂಡಿತ್ತು. ಈಗ ಡಿಸೆಂಬರ್ 16 ರವರೆಗೆ ರದ್ದುಗೊಳ್ಳಲಿದೆ.
























