ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಸಹಾಯವಾಣಿ ಸಂಖ್ಯೆ ಬದಲಾವಣೆ

ನವದೆಹಲಿ: ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಕುರಿತು ಮಾಹಿತಿ ಮತ್ತು ನೆರವು ಪಡೆಯಲು ಈ ವರೆಗೆ ಬಳಕೆ ಮಾಡಲಾಗುತ್ತಿದ್ದ ಉಚಿತ ಸಹಾಯವಾಣಿ ಸಂಖ್ಯೆಯನ್ನು ಬದಲಾವಣೆ ಮಾಡಿದೆ.

ಈ ಸಂಬಂಧ ಮಾಹಿತಿಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ‌ ಅಭಿವೃದ್ಧಿ ಸಚಿವಾಲಯವು ಪ್ರಕಟಿಸಿದ್ದು, ಇದೇ ತಿಂಗಳ 31 ರಂದು ಪ್ರಸ್ತುತ ಚಾಲ್ತಿಯಲ್ಲಿರುವ 14408 ಸಂಖ್ಯೆ ರದ್ದಾಗಲಿದೆ. ನ. 1 ರಿಂದ ತೊಡಗಿದಂತೆ ಹೊಸ ಸಹಾಯವಾಣಿ ಸಂಖ್ಯೆ 1515 ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದೆ.

ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಆರ್ಥಿಕ ನೆರವು ನೀಡುವ ಈ ಪ್ರಮುಖ ಯೋಜನೆಯ ಕುರಿತು ಫಲಾನುಭವಿಗಳು ಮತ್ತು ಸಾರ್ವಜನಿಕರು ಇನ್ನು ಮುಂದೆ ತಮ್ಮ ಪ್ರಶ್ನೆಗಳು, ದೂರುಗಳು ಅಥವಾ ಮಾಹಿತಿ ಪಡೆಯಲು ನೂತನ ಸಂಖ್ಯೆ 1515ಕ್ಕೆ ಕರೆ ಮಾಡಬಹುದಾಗಿದೆ.





















































 
 
error: Content is protected !!
Scroll to Top