ಸುರತ್ಕಲ್: ನಗರದ ಬಾರೊಂದರ ಸಮೀಪ ನಿನ್ನೆ ರಾತ್ರಿ ಸುಮಾರು 11 ಗಂಟೆ ವೇಳೆಗೆ ವ್ಯಕ್ತಿಯೊಬ್ಬರಿಗೆ ಇರಿದ ಘಟನೆ ನಡೆದಿದೆ.
ಇರಿತಕ್ಕೆ ಒಳಗಾದ ವ್ಯಕ್ತಿಯನ್ನು ಮುಖೀದ್ ಎಂದು ಗುರುತಿಸಲಾಗಿದೆ. ಮುಖೀದ್ ಮತ್ತು ಇನ್ನಿಬ್ಬರು ಬಾರ್ನಲ್ಲಿದ್ದ ವೇಳೆ, ಅಪರಿಚಿತ ನಾಲ್ವರ ಜೊತೆ ವಾಗ್ವಾದ ಹತ್ತಿಕೊಂಡಿದೆ. ಈ ಗಲಾಟೆ ಬಾರ್ ಹೊರಗೆಯೂ ಮುಂದುವರಿದಿದ್ದು, ಒಬ್ಬ ಆರೋಪಿ ಮುಖೀದ್ನಿಗೆ ಇರಿದಿದ್ದಾನೆ. ಮುಖೀದ್ ಜೊತೆಗಿದ್ದ ನಿಜಾಮ್ ಎಂಬವನಿಗೂ ಈ ವೇಳೆ ಗಾಯವಾಗಿದೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























