ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಪ್ರದೀಪ್ ಈಶ್ವರ್ ಟೀಕೆಗಳಿಗೆ ತಿರುಗೇಟು ನೀಡಿರುವ ಅವರು, ಮಗನೆ… ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದರೆ ಎಚ್ಚರ. ನನ್ನ ತಾಯಿಯನ್ನು ದಗಮನದಲ್ಲಿ ಇಟ್ಟುಕೊಂಡು ನಿಂದನಾತ್ಮಕ ಮಾತನಾಡಿದ್ದೀಯ. ನಿನಗೆ ವಾರ್ನಿಂಗ್ ಕೊಟ್ಟು ಹೇಳುತ್ತಿದ್ದೇನೆ. ಮುಳ್ಳು ಹಂದಿ ಮುಖ ಇರುವ ಕರ್ನಾಟಕದ ಏಕೈಕ ಕಾಮಿಡಿ ಪೀಸು ನಿಮ್ಮಪನಿಗೆ ಮಾತ್ರ ಹುಟ್ಟಿರುವುದು. ಇನ್ಯಾರು ವಾರಸದಾರರು ಅದಕ್ಕೆ ಬರುವುದಿಲ್ಲ. ಆದರೆ ನಮ್ಮಪ್ಪ ಏನಾದರೂ ಅವರ ಪ್ರಾಯದ ಕಾಲದಲ್ಲಿ ಚಿಕ್ಕಬಳ್ಳಾಪುರದ ಕಡೆ ಹೋಗಿದ್ದರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ.. ಎಂಬುದಾಗಿ ಅವರ ಸ್ಟೈಲ್ ಅಲ್ಲೇ ಚಳಿ ಬಿಡಿಸಿದ್ದಾರೆ.
ಪ್ರದೀಪ್ ಈಶ್ವರ್ಗೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡುತ್ತಿರುವುದಕ್ಕೆ ಅವರು ಕರ್ನಾಟಕದ ಜನತೆಯ ಕ್ಷಮೆಯನ್ನೂ ಕೇಳಿದ್ದಾರೆ.
























