ಖಾದ್ಯ ತೈಲ ನೋಂದಣಿ ಕಡ್ಡಾಯ: ಪ್ರಲ್ಹಾದ ಜೋಶಿ

ನವದೆಹಲಿ: ಕೇಂದ್ರ ಸರ್ಕಾರವು ಖಾದ್ಯ ತೈಲ ವಲಯದಲ್ಲಿ ಪಾರದರ್ಶಕತೆ, ನಿಯಂತ್ರಣ, ಮೇಲ್ವಿಚಾರಣೆಗಾಗಿ 2011 ರ VOPPA ಆದೇಶಕ್ಕೆ ‌ತಿದ್ದುಪಡಿ ತಂದಿದೆ. ಈ ಆದೇಶ ಪಾಲನೆ ಮಾಡದವರ ‌ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನೀಡಿದ್ದಾರೆ.

ಎಲ್ಲಾ ಖಾದ್ಯ ತೈಲ ತಯಾರಕರು, ಸಂಸ್ಕರಣ ಘಟಕಗಳು, ಮಿಶ್ರಣಕಾರರು, ಮರು ಪ್ಯಾಕರ್‌ಗಳು ಮೊದಲಾದ ಪಾಲುದಾರರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಹಾಗೆಯೇ ಆನ್ಲೈನ್ ಪೋರ್ಟಲ್ ಮೂಲಕ ಮಾಸಿಕ ಉತ್ಪಾದನೆ, ಸ್ಟಾಕ್ ರಿಟರ್ನ್ ಸಲ್ಲಿಕೆ ಸಹ ಮಾಡಬೇಕು ಎಂದು ಸೂಚಿಸಲಾಗಿದೆ.

ರಾಷ್ಟ್ರೀಯ ಏಕಗವಾಕ್ಷಿ ವೇದಿಕೆ https://www.nsws.gov.in ಮೂಲಕ ಎಲ್ಲಾ ಖಾದ್ಯ ತೈಲ ಸಂಬಂಧಿತ ಘಟಕಗಳು ನೋಂದಣಿ ಮಾಡಿಕೊಳ್ಳಬೇಕು. https://www.edibleoilindia.in ನಲ್ಲಿ ಮಾಸಿಕ ಉತ್ಪಾದನೆ, ಸ್ಟಾಕ್, ಲಭ್ಯತೆ ರಿಟರ್ನ್‌ಗಳನ್ನು ಸಲ್ಲಿಸುವಂತೆ ‌ಸೂಚಿಸಲಾಗಿದೆ.





















































 
 
error: Content is protected !!
Scroll to Top