ಬೆಂಗಳೂರು ಲಾಡ್ಜ್‌ನಲ್ಲಿ ಪುತ್ತೂರಿನ ಯುವಕ ಮೃತಪಟ್ಟ ಪ್ರಕರಣ : ಪೋಸ್ಟ್‌ಮಾರ್ಟಂ ವರದಿಯಲ್ಲಿದೆ ಕಾರಣ

ಪ್ರೇಯಸಿ ಜೊತೆ ಒಂದು ವಾರ ಲಾಡ್ಜ್‌ನಲ್ಲಿ ತಂಗಿದ್ದ ಯುವಕ ನಿಗೂಢವಾಗಿ ಸಾವಿಗೀಡಾದ ಪ್ರಕರಣ

ಪುತ್ತೂರು : ಬೆಂಗಳೂರಿನ ಮಡಿವಾಳದ ಲಾಡ್ಜೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪುತ್ತೂರು ಸಮೀಪದ ಸೇಡಿಯಾಪಿನ ಯುವಕ ತಕ್ಷಿತ್‌ನ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕಿಡ್ನಿ ವಿಫಲಗೊಂಡಿದ್ದ ಅಂಶ ಪತ್ತೆಯಾಗಿದೆ.

ತಕ್ಷಿತ್‌ಗೆ ಕಿಡ್ನಿ ವೈಫಲ್ಯ ಮಾತ್ರವಲ್ಲದೆ ಲಿವರ್ ಸಮಸ್ಯೆ ಹಾಗೂ ಅಸ್ತಮಾ ಕಾಯಿಲೆ ಇತ್ತು ಎನ್ನುವುದು ಪತ್ತೆಯಾಗಿದೆ. ಹೀಗಾಗಿ ಇದೇ ಕಾರಣಕ್ಕೆ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.





















































 
 

ತಕ್ಷಿತ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದರು. 20 ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದು ಬೇರೆ ಬೇರೆ ಲಾಡ್ಜ್‌ನಲ್ಲಿ ವಾಸವಿದ್ದರು. 8 ದಿನ ಮಡಿವಾಳದ ಲಾಡ್ಜ್‌ಗೆ ಶಿಫ್ಟ್ ಆಗಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ಯುವಕನ ಜೊತೆಯಲ್ಲಿದ್ದ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಮೃತ ತಕ್ಷಿತ್ ಡ್ರಿಂಕ್ಸ್ ಹಾಗೂ ಚೈನ್ ಸ್ಮೋಕರ್ ಆಗಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ಕೆಲ ಮಾದರಿ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಘಟನೆ ಸಂಬಂಧ ಮಡಿವಾಳ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿತ್ತು.

ಬೆಂಗಳೂರಿನ ಮಡಿವಾಳದ ಗ್ರ್ಯಾಂಡ್ ಚಾಯ್ಸ್ ಎಂಬ ಲಾಡ್ಜ್‌ನಲ್ಲಿ 8 ದಿನಗಳಿಂದ ಪ್ರೇಯಸಿ ರಕ್ಷಿತಾ ಎಂಬ ಯುವತಿ ಜೊತೆ ತಂಗಿದ್ದ ತಕ್ಷಿತ್‌ ಅ.18ರಂದು ಹೋಟೆಲ್‌ ಕೋಣೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದ. ಅವನ ಜೊತೆಗಿದ್ದ ಯುವತಿ ಹೋಟೆಲ್‌ ಬಿಟ್ಟು ತೆರಳಿದ್ದ ಹಿನ್ನೆಲೆಯಲ್ಲಿ ಸಾವಿನ ಬಗ್ಗೆ ಅನೇಕ ಅನುಮಾನಗಳು ವ್ಯಕ್ತವಾಗಿದ್ದವು.

ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ತಕ್ಷಿತ್ ತನ್ನ ಸಹಪಾಠಿಯಾಗಿದ್ದ ಮಡಿಕೇರಿ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದನು. ಈ ಸಂಬಂಧ ಎರಡೂ ಕುಟುಂಬಗಳಿಗೂ ತಿಳಿದಿತ್ತು. ಅ.10ರಂದು ಇಬ್ಬರೂ ನಗರಕ್ಕೆ ಬಂದು ಲಾಡ್ಜ್‌ನಲ್ಲಿ ತಂಗಿದ್ದರು. ಒಂದು ವಾರದಿಂದ ಹೊರಗೆ ಬಾರದೆ, ಊಟ-ತಿಂಡಿಗಳನ್ನು ಆರ್ಡರ್ ಮಾಡಿಸಿಕೊಂಡು ರೂಮಿನಲ್ಲೇ ಇದ್ದರು. ಅ.16ರ ಬೆಳಗ್ಗೆ ಯುವತಿ ಊರಿಗೆ ತೆರಳಿದ್ದಳು. ಅಂದು ಸಂಜೆ ತಕ್ಷಿತ್ ಯುವತಿಗೆ ಕರೆ ಮಾಡಿ, ಮತ್ತೊಂದು ದಿನ ರೂಮ್ ಕಾಯ್ದಿರಿಸುವುದಾಗಿ ಹೇಳಿ ಹಣ ಪಡೆದುಕೊಂಡಿದ್ದ. ಸ್ವಿಗ್ಗಿ ಮೂಲಕ ಊಟ ಆರ್ಡರ್ ಮಾಡಿದ್ದಿದ್ದು, ಅದರ 125 ರೂ.ಗಳನ್ನು ಯುವತಿಯೇ ಡಿಜಿಟಲ್ ವ್ಯಾಲೆಟ್ ಮೂಲಕ ಪಾವತಿಸಿದ್ದಳು. ಆದರೆ ಹೋಟೆಲ್‌ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದ.

error: Content is protected !!
Scroll to Top