ದೀಪಾವಳಿ ಬರೆ ಒಂದು ದಿವಸಗಳ ಹಬ್ಬವಲ್ಲ ಐದು ದಿವಸಗಳ ಕಾಲ ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯ ಪ್ರಕಾರ ಅಕ್ಟೊಬರ್ 20 ರಂದು ದೀಪಾವಳಿ ಸೂರ್ಯಸ್ತದ ನಂತರ ಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ ಮರುದಿನ ನರಕಚತುರ್ದಶಿ ಅಥವಾ ದೀಪಾವಳಿ ಯನ್ನು ಆಚರಣೆ ಮಾಡುತ್ತಾರೆ ನರಕ ಚತುರ್ದಶಿಯಂದು ಬೆಳಿಗ್ಗೆ ತಿಲ ಮತ್ತು ಎಣ್ಣೆ ಹಚ್ಚಿ ಸ್ಥಾನ ಮಾಡುವ ಸಂಪ್ರದಾಯವಿದೆ ಹಾಗೂ ಗೋವರ್ಧನ ಪೂಜೆ ಅಂಗಡಿ ಪೂಜೆ ಬಲಿಪಾಡ್ಯಮಿ ಆಚರಣೆ ಹಾಗೂ ಸಹೋದರಿಯರು ಸಹೋದರರ ಹಣೆಗೆ ತಿಲಕವನ್ನು ಹಚ್ಚಿ ಒಣಗಿದ ಗೋಲವನ್ನು ಉಡುಗೊರೆಯಾಗಿ ನೀಡುತ್ತಾರೆ.

ದೀಪಾವಳಿ ಹಬ್ಬವನ್ನು ಏಕೆ ಆಚರಣೆ ಮಾಡುತ್ತಾರೆ ನರಕಚತುರ್ದಶಿ ದಿನದಂದು ದೀಪಗಳನ್ನು ಪಟಾಕಿಗಳನ್ನು ಹಚ್ಚಲಾಗುತ್ತೆ ಇದರ ವಿಶೇಷತೆ ಏನು?
ಒಬ್ಬ ಹಿರಾಣ್ಯಕ್ಷ ಎಂಬ ಭಯಂಕರ ರಾಕ್ಷಸನಿದ್ದ ಭೂದೇವಿಯನ್ನು ಅಪಹರಿಸಿ ಸಮುದ್ರದ ಆಳದಲ್ಲಿ ಬಂಧಿಸಿದ ಭೂ ದೇವಿ ತನ್ನನ್ನು ರಕ್ಷಿಸು ಅಂತ ವಿಷ್ಟುದೇವನಲ್ಲಿ ಕೇಳಿ ಕೊಂಡಾಗ ವಿಷ್ಟು ವರಹರೂಪ ತಾಳಿ ಭೂ ದೇವಿಯನ್ನು ಕಾಪಾಡಲು ಸಮುದ್ರಕ್ಕೆ ಇಳಿಯುತ್ತನೇ ಸಮುದ್ರ ದ ಆಳದಲ್ಲಿ ಹಿರಣ್ಯಕ್ಷ ರಾಕ್ಷಸನನ್ನು ಅಂತ್ಯಗೊಳಿಸಿದ ಭೂ ದೇವಿಯನ್ನು ಮತ್ತೆ ಮೇಲಕ್ಕೆ ತಂದು ರಕ್ಷಿಸುತ್ತಾನೆ ಅನಂತರ ಭೂ ದೇವಿ ವಿಷ್ಟುವಿನಿಂದ ಗರ್ಭವತಿ ಆಗುತ್ತಾಳೆ ಇದರಿಂದ ಅ ಸಮಯದಲ್ಲಿ ವಿಷ್ಟು ವಿಗೂ ಭೂ ದೇವಿಗೂ ಒಂದು ಮಗು ಜನಿಸುತ್ತೆ ಅವನೇ ಹೆಸರೇ ನರಕಾಸುರನೆಂಬ ಮಹಾವಿಷ್ಟುವಿನ ವರವಾಗಿ ಜನಿಸಿ ನರಕಾಸುರ ಬಹಳ ಶಕ್ತಿಶಾಲಿಯಾದನು ಹಾಗೆ ಕಠಿಣ ತಪಸ್ಸುಗಳನ್ನು ಮಾಡಿ ಬ್ರಮ್ಮದೇವನಿಂದ ಸಾಕಷ್ಟು ವರಗಳನ್ನು ಪಡೆದುಕೊಂಡು ಇನ್ನು ಹೆಚ್ಚು ಶಕ್ತಿಶಾಲಿಯಾದನು. ಆದರೆ ನರಕಾಸುರ ಇನ್ನೊಬ್ಬ ಬಾಣಸುರನೆಂಬ ರಾಕ್ಷಸನ ಸಹವಾಸ ಮಾಡುತ್ತನೋ ಭೂ ತಾಯಿ ಮಗನಾದ ನರಕಾಸುರ ಬಹಳ ದುಷ್ಟನಾಗಿ ಪರಿವರ್ತನೆಗೊಳ್ಳುತ್ತಾನೆ ಇವನು ಎಷ್ಟು ಪರಕ್ರಮಿ ಎಂದರೆ ಇವನ ವಿರುದ್ಧ ಯಾರೇ ನಿಂತರು ಸೋಲು ಒಪ್ಪಿಕೊಳ್ಳುತ್ತ ಇದ್ದರು ಇವನನ್ನು ಯಾರಿಂದಲೂ ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ ಹಾಗೆ ಒಂದು ದಿನ ಭೂ ಲೋಕದಲ್ಲಿ ಇರುವ ಎಲ್ಲಾ ರಾಜರುಗಳ ಜೊತೆ ಯುದ್ಧಮಾಡಿ ರಾಜ್ಯವನ್ನೆಲ್ಲ ಅವರಿಂದ ಕಸಿದುಕೊಂಡ ಅರಮನೆಯಲ್ಲಿ ಇರುತ್ತಿದ್ದ ರಾಜ ಕನ್ಯೆಯರನ್ನು ಅಪಹರಿಸಿ ಗುಟ್ಟಾಗಿ ಕರೆತಂದು ತನ್ನ ಸಾಮ್ರಾಜ್ಯದಲ್ಲಿ ಅವರನ್ನು ಬಂದಿಸುತ್ತಿದ್ದ ಅದರ ಜೊತೆಗೆ ದೇವಾ ಲೋಕದಲ್ಲಿ ಇರುವ ದೇವಾ ಕನ್ಯೆರನ್ನು ಅಪಹರಿಸಿಸಿದ ಇದರಿಂದ ದೇವಲೋಕದ ಇಂದ್ರದೇವಾನಿಗೂ ತೊಂದ್ರೆ ಉಂಟಾಯಿತು ಇಂದ್ರನು ಕೂಡ ಅವನ ಮುಂದೆ ಸೋತು ಹೋಗುತ್ತಾನೆ ಏಕೆಂದರೆ ನರಕಾಸುರನು ಅತೀ ಕಠಿಣವಾದ ತಪಸ್ಸಿನಿಂದ ಬ್ರಹ್ಮನಿಂದ ವರವನ್ನು ಪಡೆದುಕೊಂಡಿದ್ದ ಅ ವರದಿಂದ ನರಕಾಸುರ ಕೇವಲ ಅವನ ತಾಯಿಯಿಂದ ಮಾತ್ರ ಕೊಳ್ಳಲು ಸಾಧ್ಯ ಇದರಿಂದ ಪ್ರತಿಕ್ಷಣ ತೊಂದರೆಗಳನ್ನು ತಾಳಲಾರದೆ ಭೂಲೋಕವಾಸಿಗಳು ದೇವತೆಗಳು ಶ್ರೀ ಕೃಷ್ಣನಾ ಪತ್ನಿಯಾದ ಸತ್ಯಭಾಮೆಯಲ್ಲಿ ಮೊರೆ ಇಟ್ಟರು ಏಕೆಂದರೆ ಸತ್ಯಭಾಮೆ ಭೂಮಿತಾಯಿಯ ಮತ್ತೊಂದು ಅವತಾರ ಆಗಿದ್ದಳು ಶ್ರೀಯರಲ್ಲಿ ನರಕಾಸುರನ ವರ್ತನೆ ತಿಳಿದು ಬಹಳ ಕೋಪಗೊಂಡು ನರಕಾಸುರನ ಜೊತೆ ಯುದ್ಧ ಮಾಡಲು ಶ್ರೀ ಕೃಷ್ಣನಲ್ಲಿ ವಿಚಾರ ತಿಳಿಸಿದಳು ಆಗ ಶ್ರೀಕೃಷ್ಣ ಸತ್ಯಭಾಮೆಯೊಂದಿಗೆ ಗರುಡಪರ್ವತವನ್ನು ಏರಿ ನರಕಾಸುರನ ಸ್ಥಳವಾಗಿದ್ದ ಜ್ಯೋತಿಷ್ಯಪುರದ ಮೇಲೆ ದಾಳಿ ಮಾಡಿದರು ಅ ಯುದ್ಧ ಭಯಂಕರವಾಗಿದ್ದು ಅ ಯುದ್ಧದಲ್ಲಿ ಶ್ರೀಕೃಷ್ಣ ನು ನರಕಾಸುರನನ್ನು ಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರು ಅಸಾಧ್ಯವಾಗಿತ್ತು ಕೊನೆಗೆ ಅ ವರದ ಪ್ರಕಾರ ಸತ್ಯಭಾಮೆಯು ಅನೇಕ ಬಾಣಗಳನ್ನು ಬಿಟ್ಟು ನರಕಾಸುರನನ್ನು ಸಂಹಾರ ಮಾಡಿದಳು. ಅಂದಿನ ದಿನವನ್ನು ನರಕ ಸಂಹಾರ ದಿನ ಜನರಿಗೆ ಸಂತಸದ ತಂದ ಹಬ್ಬದ ದಿನವಾಗಿ ಆಚರಣೆ ಮಾಡಲಾಯಿತು.
ಬಲಿಪಾಡ್ಯಮಿ ಹಬ್ಬದ ವಿಶೇಷತೆ ಏನು?
ಬಲಿ ಎಂಬ ರಾಕ್ಷಸ ಒಬ್ಬ ರಾಜನಾಗಿದ್ದ ಅವನು ಶ್ರೇಷ್ಠ ರಾಜನಲ್ಲಿ ಒಬ್ಬನಾಗಿದ್ದ ಸತ್ಯ ಧರ್ಮ ಪ್ರಾಮಾಣಿಕ ಕತೆಯನ್ನು ಹೊಂದಿದ್ದ ಅಷ್ಟೇ ಅಲ್ಲದೆ ಇವನು ವಿಷ್ಟು ವಿನ ಪರಮಭಕ್ತನಾಗಿದ್ದ ಹಾಗೂ ವರ ಪಡೆದು ದಿನದಿಂದ ದಿನಕ್ಕೆ ಅವನ ಶಕ್ತಿ ಹೆಚ್ಚಾಗುತ್ತಿತ್ತು ಹೀಗೆ ಒಮ್ಮೆ ಅ ಬಲಿಚಕ್ರವರ್ತಿಯು ಇಂದ್ರನೊಂದಿಗೆ ಯುದ್ಧ ಮಾಡಲು ಮುಂದಾದ ದೇವತೆಗಳನ್ನೆಲ್ಲ ಗೆದ್ದು ಇಂದ್ರ ನ ಸಿಂಹಾಸನವನ್ನು ಅಕ್ರಮಿಸಲು ಯೋಚಿಸುತ್ತಿದ್ದ ಇದರಿಂದ ಭಯಭಿತನಾದ ಇಂದ್ರ ವಿಷ್ಟುವಿನ ಹತ್ರ ಹೋಗಿ ನಮ್ಮನ್ನು ಕಾಪಾಡು ಎಂದು ಬೇಡಿಕೊಂಡನು ಭೂಮಂಡಲವನ್ನು ಅಳುತ್ತಿದ್ದ ಅ ಬಲಿ ರಾಜನು ಎಲ್ಲಾ ಲೋಕವನ್ನು ನಾನೇ ಅಳಬೇಕು ಎಂದು ಅಶ್ವಮೇಧ ಯಾಗವನ್ನು ಮಾಡಲು ಮುಂದಾಗುತ್ತಾನೆ ಇವನನ್ನು ಹೇಗಾದರೂ ಮಾಡಿ ತಡೆಯಬೇಕು ಅಂದುಕೊಂಡು ಅದಿತಿಯ ಮಗನಾದ ವಾಮನಮೂರ್ತಿ ಎಂಬ ಹೆಸರಿನಿಂದ ವಿಷ್ಟು ವು ಪುಟ್ಟ ಬಾಲಕನಾಗಿ ಜನಿಸುತ್ತಾನೆ ಅ ಬಾಲಕ ಬಲಿ ಚಕ್ರವರ್ತಿ ಮಾಡುತ್ತಿದ್ದ ಅಶ್ವಮೇಧ ಯಾಗದ ಸ್ಥಳಕ್ಕೆ ಬರುತ್ತಾನೆ ಅ ಕ್ಷಣ ತನ್ನನ್ನು ಭೇಟಿಯಾಗಲು ಬ್ರಾಮಣ ಪುಟ್ಟ ಬಾಲಕನನ್ನು ಕಂಡು ಸ್ವಾಗತಿಸಿ ನಿಮಗೆ ನನ್ನಿಂದ ಏನು ಬೇಕು ಅಂತ ಕೇಳುತ್ತಾನೆ.
ಆಗ ಅ ಬಾಲಕ ನನಗೆ ಕೇವಲ ಮೂರೇ ಮೂರು ಪಾದಗಳನ್ನು ಇಡುವಷ್ಟು ಜಾಗ ಕೊಡು ಸಾಕು ಅಂತ ಕೇಳುತ್ತಾನೆ ಅ ಬಲಿ ರಾಜನು ನಗುತ್ತ ನಿನ್ನ ಕೋರಿಕೆ ಇಷ್ಟೇನಾ ಎಂದು ಹೇಳುತ್ತಾ ಒಪ್ಪಿಕೊಂಡನು ಅ ಸಮಯದಲ್ಲಿ ಅಲ್ಲಿಗೆ ಬಂದ ಶುಕ್ರಚಾರ್ಯರು ಪುಟ್ಟ ಬಾಲಕನನ್ನು ಕಂಡು ಇವನು ಬೇರರೂ ಅಲ್ಲ ವಿಷ್ಟು ಎಂದು ತಿಳಿದು ಇದಕ್ಕೆ ಒಪ್ಪಿಕೊಳ್ಳಬೇಡ ಬಲಿ ಎಂದು ಹೇಳಿದರು ಆದರೆ ಬಲಿಚಕ್ರವರ್ತಿವು ದಾನಶೂರ ಕೊಟ್ಟ ಮಾತಿಗೆ ಎಂದಿಗೂ ತಪ್ಪಲಾರ ಬಲಿ ರಾಜನು ಬಾಲಕನ ಮಾತಿಗೆ ಒಪ್ಪಿಕೊಂಡನು ಆಗ ಅ ಪುಟ್ಟ ಬಾಲಕನು ನೋಡುತ್ತಿದ್ದಂತೆ ಬ್ರಹತ ಆಕಾರವಾಗಿ ಬೆಳೆದ ಮೊದಲ ಹೆಜ್ಜೆ ಬಲಿಚಕ್ರವರ್ತಿಯ ಪೂರ್ತಿ ಸಾಮ್ರಾಜ್ಯ ದ ಮೇಲೆ ಇಡುತ್ತಾನೆ ಮತ್ತೊಂದು ಪಾದವನ್ನು ಎಲ್ಲಿ ಇಡಲಿ ಎಂದು ಕೇಳಿದಾಗ ಬಲಿ ರಾಜನು ಆಕಾಶವನ್ನು ತೋರಿಸುತ್ತಾನೆ ಸರಿ ಎಂದು ಆಕಾಶದ ಪೂರ್ತಿ ಒಂದು ಪಾದ ಇಟ್ಟ ಅವಾಗ ಬಲಿಚಕ್ರವರ್ತಿಗೆ ಅರ್ಥ ಆಗುತ್ತೆ ಇದು ಬೇರಾರು ಅಲ್ಲ ಸಾಕ್ಷಾತ್ ಮಹಾವಿಷ್ಟು ಎಂದು ತನ್ನ ದೇವನಿಗೆ ಹೆಜ್ಜೆ ಇಡಲು ಜಾಗ ಬೇಕಾಗಿದೆ ಅದು ನನ್ನ ತಲೆಯ ಮೇಲೆ ಇಟ್ಟರೆ ಮತ್ತೊಂದು ಪುಣ್ಯ ಇಲ್ಲ ಎಂದು ಭಾವಿಸಿ ಮೂರನೇ ಹೆಜ್ಜೆ ಎಲ್ಲಿಡಲಿ ಎಂದು ಕೇಳಿದಾಗ ಬೇರೆಲ್ಲೂ ಬೇಡ ನನ್ನ ತಲೆಯ ಮೇಲಿಡು ಎಂದು ಹೇಳುತ್ತಾನೆ ಆಗ ವಿಷ್ಟು ವು ತನ್ನ ಪಾದವನ್ನು ಬಲಿಯ ಮೇಲಿಟ್ಟು ಪಾತಾಳಕ್ಕೆ ತುಳಿದು ಇವನು ನನ್ನ ಪರಮ ಭಕ್ತನಾಗಿದ್ದರಿಂದ ಇವನಿಗೆ ಮೋಕ್ಷ ಮಾಡುತ್ತೇನೆ ಇವನನ್ನು ಭೂಲೋಕದಲ್ಲಿ ಪ್ರತಿ ವರುಷ ಬಲಿಪಾಡ್ಯಮಿಯಂದು ಪೂಜಿಸಲಾಗುತ್ತೆ ಎಂದು ಹೇಳಿದನು ಆದ್ದರಿಂದ ದೀಪಾವಳಿ ಸಮಯದಲ್ಲಿ ಬಲಿಂದ್ರ ಪೂಜೆ ಮಾಡಲಾಗುತ್ತೆ.
ರವಿ ಪಾಂಬಾರ್ ಸಂಚಾಲಕರು ಆರ್ ಪಿ ಕಲಾ ಸೇವಾ ಟ್ರಸ್ಟ್ ( ರಿ ) ಪಾಂಬಾರು

























