ನಂದಗೋಕುಲ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ ಕರ್ನಾಟಕ ಕೇಂದ್ರ ಕಚೇರಿ ತುಮಕೂರು, ಮಂಗಳೂರು ಜಿಲ್ಲಾ ಬೆಳ್ತಂಗಡಿ, ಕಳಿಯ ಮತ್ತು ಗುರುವಾಯನಕೆರೆ ಯೋಗ ಶಾಖೆಯ ಯೋಗ ಬಂಧುಗಳು ದೀಪಾವಳಿ ಗೋ ಪೂಜೆಯ ಪ್ರಯುಕ್ತ ಕಾಯರ್ತಡ್ಕದ ನಂದಗೋಕುಲ ಗೋಶಾಲೆಗೆ ಇಂದು ಮುಂಜಾನೆ ಭೇಟಿ ನೀಡಿ ಸಾಮೂಹಿಕ ಗೋಪೂಜೆ ನೆರವೇರಿಸಿದರು.

ಯೋಗಬಂಧು ಅಶ್ವಥ್ ಗೋಪೂಜೆಯ ಮಹತ್ವದ ಬಗ್ಗೆ ಬೌದ್ಧಿಕ ನೀಡಿದರು. ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್, ಸಹ ಶಿಕ್ಷಕ ಸುಕೇಶ್,ವಿಜಯಣ್ಣ ಹಾಗೂ ಮೂರು ಯೋಗ ಶಾಖೆಗಳ 85 ಯೋಗ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋಪೂಜೆಯಲ್ಲಿ ಪಾಲ್ಗೊಂಡರು.

error: Content is protected !!
Scroll to Top