ಸಂಘಟನೆ ಕಟ್ಟುವ ಹಕ್ಕು ಸಂವಿಧಾನವೇ ಕೊಟ್ಟಿದೆ
ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಎಲ್ಲರಿಗೂ ಸಂಘಟನೆ ಕಟ್ಟುವ ಹಕ್ಕು ಸಂವಿಧಾನವೇ ನೀಡಿದ್ದು, ಇದೀಗ ಸಂಘಟನೆ ನಿಷೇಧ ಮಾಡುವ ಕ್ರಮ ಸಂವಿಧಾನ ವಿರೋಧಿ ನಡೆ ಎಂದು ಮಾಜಿ ಲೋಕಾಯುಕ್ತ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದ್ದಾರೆ.
ಸಂಘಟನೆ ಮಾಡುವ ಅಧಿಕಾರ, ಹಕ್ಕು ಸಂವಿಧಾನ ಕೊಟ್ಟಿದೆ. ಹೀಗಾಗಿರುವಾಗ ಆರ್.ಎಸ್.ಎಸ್. ಸಂಘಟನೆ ನಿಷೇಧಿಸಲು ಹೊರಟಿರುವುದು ಸಂವಿಧಾನ ವಿರೋಧಿ ಕ್ರಮವಾಗುತ್ತದೆ ಎಂದರು. ಒಂದು ವೇಳೆ ಸರ್ಕಾರ ಆರ್.ಎಸ್.ಎಸ್ ಸಂಘಟನೆ ನಿಷೇಧ ಮಾಡಿದರೆ ಆ ನಿರ್ಧಾರವೇ ಕಾಂಗ್ರೆಸ್ಗೆ ತಿರುಗು ಬಾಣವಾಗಲಿದೆ ಎಂದರು.
ರಾಜ್ಯದಲ್ಲಿ ಆರ್.ಎಸ್.ಎಸ್. ನಿಷೇಧಿಸಲು ಕಾಂಗ್ರೆಸ್ ಪಕ್ಷ ಹೊರಟಿದೆ. ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷವನ್ನೇ ನಿಷೇಧಿಸುತ್ತಾರೆ. ಆಗ ಅವರ ಆಟ ಶುರುವಾಗುತ್ತದೆ. ಒಟ್ಟಿನಲ್ಲಿ ನಿಷೇಧಿಸುವ ಆಟ ಜೋರಾಗಿದೆ ಎಂದರು.
























