ಜಿಡೆಕಲ್ಲಿನಲ್ಲಿ ಸಾಹಿತ್ಯ ವಿಚಾರ ಗೋಷ್ಠಿ ಮತ್ತು ದತ್ತಿ ನಿಧಿ ವಿತರಣೆ

ಪುತ್ತೂರು: ಜಿಡೆಕಲ್ಲಿನಲ್ಲಿರುವ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮಂಗಳೂರಿನ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶಗಳ ಸಹಯೋಗದಲ್ಲಿ ಸಾಹಿತ್ಯ ವಿಚಾರ ಗೋಷ್ಠಿ ಮತ್ತು ದತ್ತಿ ನಿಧಿ ವಿತರಣೆಯ ಒಂದು ದಿನದ ಕಾರ್ಯಕ್ರಮ ನಡೆಯಿತು.

ಮಧ್ಯಮ ಮಾರ್ಗ
ಕಾರ್ಯಕ್ರಮವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ನೀಡಿದ ಖ್ಯಾತ ಆಧ್ಯಾತ್ಮಿಕ, ಸಾಹಿತ್ತಿಕ ಮತ್ತು ಸಾಮಾಜಿಕ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ ಸಾಹಿತ್ಯವು ಜೀವನಕ್ಕೆ ಮಧ್ಯಮ ಮಾರ್ಗವನ್ನು ತೋರಿಸುತ್ತದೆ ಎಂದು ಹೇಳಿ ಇಂದು ವಿದ್ಯಾರ್ಥಿಗಳಲ್ಲಿ ಸಾಹಿತ್ತಿಕ ಪ್ರಜ್ಞೆ ಮೂಡಿಸುವ ಈ ಕಾರ್ಯಕ್ರಮ ಅರ್ಥಪೂರ್ಣ ಎಂದು ಪ್ರತಿಪಾದ8ಸಿದರು.

ಘನ ಉಪಸ್ಥಿತಿಯಲ್ಲಿದ್ದ ಕ. ಲೇ.ವಾ. ಸಂಘದ ಅಧ್ಯಕ್ಷೆ ಮತ್ತು ಪುತ್ತೂರಿನ ಪೂರ್ವ ಶಾಸಕಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ ಸಾಹಿತ್ಯ ಮಕ್ಕಳಿಗೆ ಅಭಿವೃದ್ಧಿಯ ಸೇತುವೆಯಾಗುತ್ತದೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಎನ್. ದುಗ್ಗಪ್ಪ ಅವರು ಶುಭ ಹಾರೈಸಿದರು.





















































 
 

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಅವರು ಇಂತಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜ್ಞಾನ ಸಂಗ್ರಹ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿ ತೋಳ್ಪಾಡಿಯವರಂತಹ ಜ್ಞಾನಿಗಳನ್ನು ಸನಿಹದಿಂದ ಕಾಣುವ ಮತ್ತು ಕೇಳುವ ಅವಕಾಶ ನಮ್ಮೆಲ್ಲರ ಪುಣ್ಯ ಎಂದು ಹೇಳಿದರು.

ಕನ್ನಡ ವಿಭಾಗದ ಪ್ರೊಫೆಸರ್ ಡಾ. ಹರಿಣಾಕ್ಷಿ ಎಂ.ಡಿ. ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕ ಪ್ರೊ. ಪುಷ್ಪರಾಜ್ ಕೆ. ಸ್ವಾಗತಿಸಿ ವಾಣಿಜ್ಯಶಾಸ್ತ್ರದ ಉಪನ್ಯಾಸಕಿ ಶ್ರೀಮತಿ ಚಂದ್ರಕಲಾ ಅವರು ವಂದನಾರ್ಪಣೆ ಸಲ್ಲಿಸಿದರು. ವಿದ್ಯಾರ್ಥಿನಿ ಸೌಜನ್ಯಾ ಮತ್ತು ಬಳಗ ಪ್ರಾರ್ಥಿಸಿದರು. ಮುಂದೆ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ ಮತ್ತು ಪದ್ಮಾ ಶೆಣೈ, ಲಲಿತಾ ರೈ ಮತ್ತು ಎ.ಪಿ. ಮಾಲತಿ ದತ್ತಿನಿಧಿ ಬಹುಮಾನ ವಿತರಣೆ ಕಾರ್ಯಕ್ರಮಗಳು ನಡೆದವು.

error: Content is protected !!
Scroll to Top