ಶ್ರೀಶೈಲಂ ‌ಮಲ್ಲಿಕಾರ್ಜುನ ಸ್ವಾಮಿ ದೇವರಿಗೆ ಪ್ರಧಾನಿ ಮೋದಿ ಪೂಜೆ

ಶ್ರೀಶೈಲಂ: ಆಂಧ್ರಪ್ರದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಶ್ರೀಶೈಲಂ‌ನ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ವರ್ಲ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಇದೇ ವೇಳೆ ಪ್ರಧಾನಿ ಅವರು ಹಸುವಿನ ಹಾಲು, ತುಪ್ಪ, ಸಕ್ಕರೆ, ಜೇನು ತುಪ್ಪ, ಮೊಸರು ಮಿಶ್ರಿತ ರುದ್ರಾಭಿಷೇಕವನ್ನು ಶ್ರೀ ದೇವರಿಗೆ ನೆರವೇರಿಸಿದರು‌. ಆ ಬಳಿಕ ದೇಗುಲದಲ್ಲಿ ಕೊಂಚ ಧ್ಯಾನ ನಡೆಸಿ, ಬಳಿಕ ಪ್ರಾರ್ಥಿಸಿದರು‌.

ಒಂದೇ ದೇವಾಲಯದ ಸಂಕೀರ್ಣದಲ್ಲಿ ಜ್ಯೋತಿರ್ಲಿಂಗ ಮತ್ತು ಶಕ್ತಿ ಪೀಠಗಳೆರಡೂ ಇದ್ದು, ಇದು ವಿಶೇಷ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ.





















































 
 
error: Content is protected !!
Scroll to Top